ಪಿಒಪಿ ಗಣಪತಿ ಮೂತಿರ್ ಮಾಡದಂತೆ ಕಲಾವಿದರಿಗೆ ತಾಕೀತು

12-RNR-01
Published on

ರಾಣೆಬೆನ್ನೂರ: ನಗರದಲ್ಲಿ ಗಣೇಶ ಚತುಥಿರ್ ಹಿನ್ನೆಲೆಯಲ್ಲಿ ಪಿಒಪಿ ಗಣಪತಿ ಮೂತಿರ್ ಸಿದ್ಧಪಡಿಸುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸೋಮವಾರ ತಹಸೀಲ್ದಾರ್​ ಹಾಗೂ ನಗರಸಭೆ ಆಯುಕ್ತರ ತಂಡ ನಗರದ ವಿವಿಧ ಸ್ಥಳಗಳಲ್ಲಿ ಭೇಟಿ ನೀಡಿ ಪರಿಶೀಲಿಸಿದರು.
ನಗರದ ಕುರಬಗೇರಿ, ಮಾರುತಿ ನಗರ, ಸಿದ್ದೇಶ್ವರ ನಗರ ಸೇರಿ ಗಣಪತಿ ಮಾಡುವ ಕಲಾವಿದರ ಮನೆ ಹಾಗೂ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು ಯಾವುದೇ ಕಾರಣಕ್ಕೂ ಪಿಒಪಿ ಗಣಪತಿ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ತಹಸೀಲ್ದಾರ್​ ಆರ್​.ಎಚ್​. ಭಗವಾನ್​, ನಗರದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಯಾವುದೇ ಕಾರಣಕ್ಕೂ ಪಿಓಪಿ ಗಣಪತಿ ಮಾರಾಟ ಮಾಡುವಂತಿಲ್ಲ. ಸದ್ಯ ಸ್ಥಳಿಯ ಕಲಾವಿದರು ಪಿಓಪಿ ಗಣಪತಿ ಮೂತಿರ್ ಮಾಡುತ್ತಿಲ್ಲ. ಮಣ್ಣಿನ ಗಣಪತಿ ಮಾಡುತ್ತಿದ್ದಾರೆ.
ಹಬ್ಬ ಸಮೀಪಿಸಿದ ಸಮಯದಲ್ಲಿ ಗಣಪತಿ ಮೂತಿರ್ ಮಾರಾಟ ಮಾಡುವ ಮಳಿಗೆದಾರರು ಯಾವುದೇ ಕಾರಣಕ್ಕೂ ಪಿಓಪಿ ಗಣಪತಿ ಮೂತಿರ್ ತರಿಸುವಂತಿಲ್ಲ. ಅವರಿಗೆ ಪರವಾನಗಿ ಕೊಡುವ ಮುಂಚೆಯೆ ಪಿಓಪಿ ಮಾರಾಟ ಮಾಡುವುದಿಲ್ಲವೆಂದು ಪ್ರಮಾಣಪತ್ರ ಬರೆಯಿಸಿಕೊಳ್ಳುತ್ತೇವೆ. ಒಂದು ವೇಳೆ ಸರ್ಕಾರದ ನಿಯಮ ಮೀರಿ ಪಿಓಪಿ ಗಣಪತಿ ಮಾರಾಟ ಮಾಡಿದರೆ ಅಂಥವರ ಪರವಾನಗಿ ರದ್ದು ಪಡಿಸುವ ಜತೆಗೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ನಗರಸಭೆ ಆಯುಕ್ತ ಕ್ಕೀರಪ್ಪ ಇಂಗಳಗಿ, ಪರಿಸರ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net