ಕಳಪೆ ಗುಣಮಟ್ಟದ ರಾಷ್ಟ್ರಧ್ವಜ ಮಾರಾಟ

14kls1
ರಾಷ್ಟ್ರಧ್ವಜ ಪ್ರದರ್ಶಿಸುತ್ತಿರುವ ಕನ್ನಡ ರಾಜು.
Published on

ಕಳಸ: ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಅಂಚೆ ಕಚೇರಿಯಲ್ಲಿ ಮಾರಾಟ ಮಾಡುತ್ತಿರುವ ರಾಷ್ಟ್ರಧ್ವಜದ ಗುಣಮಟ್ಟ ಕಳಪೆಯಾಗಿದೆ ಎಂದು ಡಾ.ರಾಜ್ ನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು ಆರೋಪಿಸಿದ್ದಾರೆ.
ಕಳಸ ಅಂಚೆ ಕಚೇರಿಯಲ್ಲಿ ನಾನು ಖರೀದಿಸಿದ ರಾಷ್ಟ್ರ ಧ್ವಜ ಕಳಪೆಯಾಗಿದೆ. ರಾಷ್ಟ್ರದ್ವಜಕ್ಕೆ ಒಂದು ನಿಯಮವಿದೆ. ನಾನು ತೆಗದುಕೊಂಡ ಧ್ವಜದಲ್ಲಿ ನಿಯಮದ ಪ್ರಕಾರ ಬಣ್ಣವಿಲ್ಲ. ಕಳೆದ ಬಾರಿ ಸ್ವಾತಂತ್ರೃ ದಿನಾಚರಣೆಗೂ ಇದೇ ರೀತಿ ಕಳಪೆ ಗುಣಮಟ್ಟದ ರಾಷ್ಟ್ರಧ್ವಜ ಮಾರಾಟ ಮಡಲಾಗಿತ್ತು. ಆಗಲೂ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಈ ಬಾರಿ ಮತ್ತೆ ಪುನಾರಾವರ್ತನೆ ಯಾಗಿರುವುದು ಬೇಸರದ ಸಂಗತಿ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net