ನಟಿ ಪೂನಂ ಪಾಂಡೆ ನಿಧನ; ಅಂತಿಮ ಸಂಸ್ಕಾರ ನಡೆದಿದ್ದು ಎಲ್ಲಿ, ಇಲ್ಲಿದೆ ವಿವರ

Poonam Pandey
Published on

ಕಾನ್ಪುರ: ಬಾಲಿವುಡ್​ ನಟಿ ಪೂನಂ ಪಾಂಡೆ ಅಕಾಲಿಕ ನಿಧನ ಅನೇಕರಿಗೆ ಶಾಕ್​ ನೀಡಿದ್ದು, 32ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಸಾಯುವ ಎರಡು ದಿನಕ್ಕೂ ಮುನ್ನ ಹಾಯಾಗಿ ಸುತ್ತಾಡಿಕೊಂಡು ಫೋಟೋಶೂಟ್​ ಮಾಡಿಸಿದ್ದ ನಟಿ ಏಕಾಏಕಿ ಮೃತಪಟ್ಟರು ಎಂದರೆ ಯಾರಿಂದಲೂ ನಂಬಲು ಸಾಧ್ಯವಾಗುತ್ತಿಲ್ಲ.

ನಟಿ ಪೂನಂ ಪಾಂಡೆ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಕಾನ್ಪುರ ಅಥವಾ ಪುಣೆಯಲ್ಲಿ ಶುಕ್ರವಾರ ಸಂಜೆ ನೆರವೇರಿದೆ ಎಂದು ತಿಳಿದು ಬಂದಿದೆ. ಕುಟುಂಬಸ್ಥರು ಹಾಗೂ ಆಪ್ತರು ಭಾಗಿಯಾಗಿದ್ದರು ಎಂದು ಅವರ ಮ್ಯಾನೇಜರ್​ ಮಾಹಿತಿ ನೀಡಿದ್ದಾರೆ. ಆದರೆ, ಪುಣೆಯಲ್ಲಿ ಅಥವಾ ಕಾನ್ಪುರದಲ್ಲಿ ನೆರವೇರಿದೆಯಾ ಎಂಬುದರ ಕುರಿತು ಮ್ಯಾನೇಜರ್​ ಸ್ಪಷ್ಟವಾಗಿ ತಿಳಿಸಿಲ್ಲ.

ಹೃದಯಾಘಾತದಿಂದ ಏಕಾಏಕಿ ಮೃತಪಟ್ಟರು ಎಂದರೆ ನಂಬಬಹುದು. ಆದರೆ, ಕ್ಯಾನ್ಸರ್​ ಉಂಟಾದರೆ ಏಕಾಏಕಿ ಮೃತಪಡಲು ಸಾಧ್ಯವೇ ಇಲ್ಲ. ಕಳೆದ ಮೂರು ದಿನಗಳ ಹಿಂದಷ್ಟೇ ಅವರು ಖುಷಿ ಖುಷಿಯಿಂದ ಪೋಸ್ಟ್ ಹಾಕಿದ್ದರು. ಪಾರ್ಟಿ ಮಾಡಿದ್ದರು. ಇದಾದ ಬಳಿಕ ಅವರು ಮೃತಪಟ್ಟಿದ್ದಾರೆ. ಡ್ರಗ್ಸ್ ಓವರ್​ಡೋಸ್​ನಿಂದ ಈ ರೀತಿ ಆಗಿದೆ ಎನ್ನುವ ಮಾತು ಕೂಡ ಕೇಳಿ ಬಂದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net