ಖ್ಯಾತ ನಟನೊಂದಿಗೆ ಮದುವೆಗೆ ಸಜ್ಜಾದ್ರಾ ಪೂಜಾ ಹೆಗ್ಡೆ?!

pr final
Published on

ಕರ್ನಾಟಕದ ಕರಾವಳಿ ಕುವರಿ ನಟಿ ಪೂಜಾ ಹೆಗ್ಡೆ ಬಾಲಿವುಡ್‌ನ ಅತ್ಯುತ್ತಮ ನಟಿಯರಲ್ಲಿ ಒಬ್ಬರು. ಪೂಜಾ 2014 ರಲ್ಲಿ ಹೃತಿಕ್ ರೋಷನ್ ಜೊತೆಗಿನ ಮೊಹೆಂಜೋದಾರೋ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು.
ಇತ್ತೀಚಿನ ದಿನಗಳಲ್ಲಿ ನಟಿ ಪೂಜಾ ಹೆಗ್ಡೆ ಲವ್‌ ಲೈಫ್‌ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಕೆಲ ತಿಂಗಳ ಹಿಂದೆ ದಿವಂಗತ ನಟ ವಿನೋದ್ ಮೆಹ್ರಾ ಅವರ ಪುತ್ರ ರೋಹನ್ ಮೆಹ್ರಾ ಅವರೊಂದಿಗೆ ಕಾರಿನಲ್ಲಿ ಹೋಗುತ್ತಿರುವುದು ಕಂಡುಬಂದಿತ್ತು.


ತೆಲುಗಿನಲ್ಲಿ ನಟಿ ಶ್ರೀಲೀಲಾಗೆ ಬೇಡಿಕೆ ಹೆಚ್ಚಾದ ಕಾರಣ ಪೂಜಾ ಅವರನ್ನು ಟಾಲಿವುಡ್‌ ಸಂಪೂರ್ಣವಾಗಿ ಬದಿಗೊತ್ತಿದೆ. ಹೀಗಾಗಿ ತೆಲುಗಿನಲ್ಲಿ ಒಂದೇ ಒಂದು ಸಿನಿಮಾ ಇಲ್ಲದೆ ಪೂಜಾ ಹೆಗಡೆ ಕಂಗಾಲಾಗಿದ್ದರು.


ಪೂಜಾ ಹೆಗ್ಡೆಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯದಲ್ಲೇ ಪೂಜಾ ಹೆಗ್ಡೆ ಮದುವೆಯಾಗಲಿದ್ದಾರೆ ಎಂದು ಇಂಡಸ್ಟ್ರಿಯಲ್ಲಿ ಭಾರೀ ಪ್ರಚಾರ ನಡೆಯುತ್ತಿದೆ.
ಪೂಜಾ, ಬಿಗ್ ಬಾಸ್ ಖ್ಯಾತಿಯ ಹಾಗೂ ಸೀರಿಯಲ್ ನಟ ರೋಹನ್ ಮೆಹ್ರಾ ಅವರನ್ನು ಪೂಜಾ ಹೆಗ್ಡೆ ಪ್ರೀತಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇವರಿಬ್ಬರೂ ಓಡಾಡುವ ವಿಚಾರವೂ ವರದಿಯಾಗಿದೆ.


ರೋಹನ್ ಮೆಹ್ರಾ ಅವರ ಜೊತೆಗೆ ನಟಿ ಸಾಕಷ್ಟು ಬಾರೀ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.. ಹೀಗಾಗಿ ನೆಟಿಜನ್ಸ್‌ ಇವರಿಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ಊಹಿಸುತ್ತಿದ್ದಾರೆ.
ಅಲ್ಲದೇ ಪೂಜಾ ಪೋಷಕರೂ ಇವರ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ದು, ಶೀಘ್ರದಲ್ಲೇ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net