ತಂದೆ ಜತೆ ಲಿಪ್‌ಲಾಕ್‌ ಮಾಡಿದ್ದ ಬಾಲಿವುಡ್ ನಟಿ!; ಹೇಳಿದ್ದೇನು ಗೊತ್ತಾ?

Pooja Bhatt (1)
Published on

ಮುಂಬೈ: ಸಿನಿಮಾಗಳಲ್ಲಿ ಕಥೆ ಮತ್ತು ಪಾತ್ರಗಳಿಗಾಗಿ ಕೆಲವು ಸೀನ್​ಗಳಲ್ಲಿ ನಟಿಸಲಾಗುತ್ತದೆ. ಲಿಪ್​ಲಾಕ್​​ ನಂತಹ ಹಸಿಬಿಸಿ ದೃಶ್ಯಗಳಲ್ಲಿಯೂ ಕಾಣಿಸಿಕೊಳ್ಳಲಾಗುತ್ತದೆ. ಹೀಗೆ ವರ್ಷಗಳ ಹಿಂದೆ ನಿರ್ಮಾಪಕ ಮಹೇಶ್ ಭಟ್‌ ಹಾಗೂ ಅವರ ಮಗಳು ನಟಿ ಪೂಜಾ ಭಟ್‌ ಲಿಪ್‌ಲಾಕ್ ಮಾಡ್ಕೊಂಡಿರೋ ಫೋಟೋ ಸಖತ್‌ ವೈರಲ್ ಆಗಿತ್ತು. ಸದ್ಯ ಈ ಫೋಟೋದ ಬಗ್ಗೆ ಪೂಜಾ ಭಟ್ ಮೌನ ಮುರಿದಿದ್ದಾರೆ.

ಸಿನಿಮಾರಂಗದಲ್ಲಿ ಪೂಜಾ ಭಟ್‌ ಮಿಂಚುತ್ತಿದ್ದ ಸಮಯದಲ್ಲಿ ಅವರ ಒಂದು ಫೋಟೋ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ಅದುವೇ ತಂದೆ ಮಹೇಶ್ ಬಟ್ ಜತೆ ಲಿಪ್‌ಲಾಕ್ ಮಾಡಿದ್ದ ಫೋಟೋ. ಇದು ಪ್ರಕಟವಾದದ್ದು ಸ್ಟಾರ್ಡಸ್ಟ್ ಮ್ಯಾಗಜಿನ್‌ನಲ್ಲಿ. ತಂದೆ-ಮಗಳಾಗಿರುವ ಪೂಜಾ ಭಟ್‌ ಮಹೇಶ್‌ ಭಟ್‌ ಪರಸ್ಪರ ಚುಂಬಿಸುವ ಫೋಟೋವನ್ನು ಮ್ಯಾಗ್‌ ಜಿನ್‌ ಗಾಗಿ ಶೂಟ್‌ ಮಾಡಲಾಗಿತ್ತು. ತಂದೆ ಮಹೇಶ್‌ ಭಟ್ ಮಡಿಲಿನ ಮೇಲೆ ಕೂತುಕೊಂಡು ಪೂಜಾ ಭಟ್‌ ಲಿಪ್‌ ಲಾಕ್‌ ಮಾಡಿರುವ ಫೋಟೋ ಮ್ಯಾಗಜಿನ್‌ ಮುಖಪುಟದಲ್ಲಿ ಹಾಕಲಾಗಿತ್ತು.1990ರಲ್ಲಿ ಈ ಕಿಸ್‌ ವಿವಾದ ನಡೆದಿತ್ತು. ಈ ಬಗ್ಗೆ ನಟಿ ಪೂಜಾ ಭಟ್‌ ಸಂದರ್ಶನವೊಂದರಲ್ಲಿ ಮತ್ತೆ ಮಾತನಾಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ನಟಿ, 'ತಂದೆಗೆ ಕಿಸ್ ಮಾಡಿರೋ ವಿಚಾರ ನನ್ನ ಪಾಲಿಗೆ ತುಂಬಾ ಸಾಮಾನ್ಯವಾಗಿದೆ. ಇದರಲ್ಲಿ ತಪ್ಪೇ ಇಲ್ಲ. ನನಗೆ ಈಗಲೂ ನೆನಪಿದೆ ಆಗ ಶಾರುಖ್‌ ಖಾನ್‌ ಅವರು ನನಗೆ ಹೇಳಿದ್ದರು. ನಿಮ್ಮ ಮಕ್ಕಳು ಸಣ್ಣದಿರುವಾಗ ನೀವು ಹೆಣ್ಣು ಮಕ್ಕಳನ್ನು ಹೊಂದಿರುವಾಗ ಮಗು ತುಂಬಾ ಬಾರಿ ಅಪ್ಪ- ಅಮ್ಮ ನನಗೊಂದು ಕಿಸ್‌ ಕೊಡಿ ಎಂದು ಹೇಳುತ್ತದೆ. ಆಗ ತಂದೆ - ತಾಯಿ ಈ ರೀತಿ ಮಾಡುತ್ತಾರೆ ಎಂದಿದ್ದರು. ನಾನು ಈಗಲೂ ನನ್ನ ತಂದೆಗೆ ಸಣ್ಣ ಮಗುವೇ ಆಗಿದ್ದೇನೆ. ತಂದೆ - ಮಗಳ ಸಂಬಂಧವನ್ನು ಬೇರೆ ದೃಷ್ಟಿಯನ್ನು ನೋಡುತ್ತಾರೋ ಅವರು ಬೇರೇನನ್ನೂ ಮಾಡಬಲ್ಲರು ಎಂಬುದನ್ನಷ್ಟೇ ಹೇಳಬಲ್ಲೆ. ಇದೆಲ್ಲ ಹೇಳಿ ನಾವು ಕೌಟುಂಬಿಕ ಮೌಲ್ಯಗಳ ಬಗ್ಗೆ ಮಾತನಾಡುತ್ತೇವೆ. ಇದೊಂದು ರೀತಿಯ ತಮಾಷೆಯ ವಿಚಾರ' ಎಂದು ಪೂಜಾ ಭಟ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net