15ರಂದು ಪೊನ್ನುಮುತ್ತಪ್ಪ ದೇವರ ಹುತ್ತರಿ ವೆಳ್ಳಾಟ

Published on

ನಾಪೋಕ್ಲು: ಪೊನ್ನುಮುತ್ತಪ್ಪ ದೇವಸ್ಥಾನ ನಾಪೋಕ್ಲು ವತಿಯಿಂದ ಡಿ.14,15 ರಂದು ಪೊನ್ನುಮುತ್ತಪ್ಪ ದೇವರ ಹುತ್ತರಿ ವೆಳ್ಳಾಟವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ. ಚಂದ್ರನ್ ಹೇಳಿದರು.

ಡಿ.14 ರಂದು ರಾತ್ರಿ ಹುತ್ತರಿ ಹಬ್ಬ ಆಚರಿಸಲಾಗುವುದು. ಡಿ.15 ರಂದು ಪೊನ್ನುಮುತ್ತಪ್ಪ ದೇವರ ವೆಳ್ಳಾಟ ನಡೆಸಲು ತೀರ್ಮಾನಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಕೇರಳದ ಪ್ರಖ್ಯಾತ ಮಡಿಯನ್ ಅವರ ನೃತ್ಯದ ಮೂಲಕ ದೇವರನ್ನು ಮಲೆ ಇಳಿಸಲಾಗುತ್ತದೆ. ಸಂಜೆ 6 ಗಂಟೆಗೆ ಮುತ್ತಪ್ಪ ದೇವರ ವೆಳ್ಳಾಟ, 7.30ಕ್ಕೆ ಗುಳಿಗ ದೇವರ ವೆಳ್ಳಾಟ, ರಾತ್ರಿ 9 ಗಂಟೆಗೆ ಕುಟ್ಟಿಚಾತ ದೇವರ ವೆಳ್ಳಾಟ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎರಡು ದಿನ ರಾತ್ರಿ ದೇವಸ್ಥಾನದ ವತಿಯಿಂದ ಅನ್ನದಾನದ ವ್ಯವಸ್ಥೆ ಕೈಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ರಾಜೀವ, ಸಮಿತಿ ಸದಸ್ಯರಾದ ಶ್ರೀಧರ್, ಹರಿದಾಸ್, ಅಜಿತ್ , ಅನಿಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net