ಜಿಲ್ಲಾಡಳಿತಕ್ಕೆ ಮತಯಂತ್ರ ಹಸ್ತಾಂತರ

HUN-JUNE-11-7(EVM MECHINE SHIFTING)
Published on

ಹುಣಸೂರು: ಪಟ್ಟಣದ ನಗರಸಭೆ ಕಚೇರಿ ಕಟ್ಟಡದಲ್ಲಿ ಇರಿಸಿದ್ದ ಮತಯಂತ್ರಗಳನ್ನು ಜಿಲ್ಲಾಡಳಿತದ ವಶಕ್ಕೆ ಒಪ್ಪಿಸಲಾಯಿತು.

ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಳಸಿದ್ದ ಮತಗಳನ್ನು ಪೊಲೀಸ್ ಭದ್ರತೆಯಲ್ಲಿ ಇಡಲಾಗಿತ್ತು. ಕೊಠಡಿಯ ಸುತ್ತ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.

ಚುನಾವಣೆ ನಡೆದ 6 ತಿಂಗಳ ಅವಧಿಯಲ್ಲಿ ಉಚ್ಚ ನ್ಯಾಯಾಲಯದಲ್ಲಿ ಯಾವುದೇ ದೂರು ದಾಖಲಾಗಿಲ್ಲದ ಕಾರಣ ತಾಲೂಕು ಆಡಳಿತದ ವಶದಲ್ಲಿದ್ದ ಇವಿಎಂಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ. ಜಿಲ್ಲಾಡಳಿತ ಕಳುಹಿಸಿದ್ದ ಲಾರಿಗಳಲ್ಲಿ ಎಲ್ಲ ಯಂತ್ರಗಳನ್ನು ಲೋಡ್ ಮಾಡಿ ಪೊಲೀಸ್ ಭದ್ರತೆಯೊಂದಿಗೆ ಕಳುಹಿಸಿಕೊಡಲಾಯಿತು ಎಂದು ತಹಸೀಲ್ದಾರ್ ಐ.ಇ.ಬಸವರಾಜ ಪತ್ರಿಕೆಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net