ಪ್ರಸ್ತುತ ರಾಜಕಾರಣ ಐಪಿಎಲ್​ನಂತಾಗಿದೆ, ಯಾರು ಯಾವ ಕಡೆ ಆಡುತ್ತಿದ್ದಾರೋ ಯಾರಿಗೂ ತಿಳಿದಿಲ್ಲ: ಮಹಾರಾಷ್ಟ್ರ ಮಾಜಿ ಸಿಎಂ

uddhav thackrey3
Published on

ಮುಂಬೈ: ಇತ್ತೀಚಿನ ದಿನಗಳಲ್ಲಿ ರಾಜಕಾರಣವು ಐಪಿಎಲ್​​ನಂತಾಗಿದೆ. ಯಾರು, ಯಾವಾಗ ಯಾರ ಪರ ಆಡುತ್ತಾರೆ ಎಂಬುದನ್ನು ನಂಬುವುದಕ್ಕೆ ಸಾಧ್ಯವಿಲ್ಲ ಎಂದು ಮಹರಾಷ್ಟ್ರದ ಮಾಜಿ ಸಿಎಂ ಉದ್ಧವ್​ ಠಾಕ್ರೆ ಹೇಳಿದ್ದಾರೆ.

ಇದನ್ನೂ ಓದಿ: ಹಸುಗೂಸಿನ ಮೃದುವಾದ ತೋಳು, ಕುತ್ತಿಗೆಯನ್ನು ಬ್ಲೇಡ್​​ನಿಂದ ಕೊಯ್ದ ತಂದೆ..!

ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ ಠಾಕ್ರೆ, ದೇಶದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ರಾಜಕೀಯ ಮಟ್ಟವು ಕೆಳಮಟ್ಟಕ್ಕೆ ತಲುಪಿದ್ದು, ಜನರು ಇದರಿಂದ ಅಸಮಾಧಾನಗೊಂಡಿದ್ದಾರೆ, ಸರ್ಕಾರವು ಇನ್ನೂ ಸಾರ್ವಜನಿಕರ ಬಗ್ಗೆ ತಲೆಕೆಡಿಸಿಕೊಂಡಂತೆ ತೋರುತ್ತಿಲ್ಲ. ನಿಮ್ಮ ಮನೆ ಬಾಗಿಲಿಗೆ ಸರ್ಕಾರ ಎಂಬ ಕಾರ್ಯಕ್ರಮ ಸರ್ಕಾರ ಜಾರಿ ಮಾಡಿದೆ ಆದರೆ ಸರ್ಕಾರ ಸಾರ್ವಜನಿಕರ ಮನೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಹೇಳಿದ್ದಾರೆ.

ಇಂದು ಮುಖ್ಯಮಂತ್ರಿಯಾಗಿರುವ ಶಿಂಧೆ ಹಿಂದೆ ಠಾಕ್ರೆಯವರ ವಿಶ್ವಾಸಾರ್ಹ ಸಹಾಯಕರಾಗಿದ್ದರು. ಅವರ ನೇತೃತ್ವದ ಬಂಡಾಯವು, ಅಂದು ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ ಬಿಜೆಪಿಯ ಅಧಿಕಾರಕ್ಕೆ ಮರಳಲು ದಾರಿ ಮಾಡಿಕೊಟ್ಟಿತು ಎಂದು ಠಾಕ್ರೆ ತಿಳಿಸಿದ್ದಾರೆ.

ಇದನ್ನೂ ಓದಿ: ಸಮೋಸಾ ಆರ್ಡರ್ ಮಾಡಲು ಹೋಗಿ 1.40 ಲಕ್ಷ ರೂ. ಕಳೆದುಕೊಂಡ ವೈದ್ಯ

ಇತ್ತೀಚೆಗೆ, ಶರದ್ ಪವಾರ್ ನೇತೃತ್ವದ ಎನ್‌ಸಿಪಿಯೂ ಕೂಡ ವಿಭಜನೆಯಾಗಿ, ಅವರ ಸೋದರಳಿಯ ಅಜಿತ್ ಪವಾರ್ ಬಿಜೆಪಿಗೆ ಬೆಂಬಲವನ್ನು ನೀಡಿದ್ದಾರೆ. ಸದ್ಯ ಅಜಿತ್​ ಪವಾರ್​​, ಬಿಜೆಪಿಯ ದೇವೇಂದ್ರ ಫಡ್ನವಿಸ್​​ರೊಂದಿಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net