ರಾಜಕಾರಣಿಯ ಮಗನಿಂದ ಯುವತಿಯ ಅಪಹರಣ, ಎರಡು ದಿನ ಗ್ಯಾಂಗ್ ರೇಪ್​!

rape
Published on

ತೆಲಂಗಾಣ: ರಾಜಕಾರಣಿಯೊಬ್ಬರ ಪುತ್ರ ಯುವತಿಯೊಬ್ಬಳನ್ನು ಅಪಹರಣ ಮಾಡಿದ್ದಲ್ಲದೆ, ಬಳಿಕ ಸ್ನೇಹಿತರ ಜತೆ ಸೇರಿ ಎರಡು ದಿನ ಗ್ಯಾಂಗ್ ರೇಪ್​ ನಡೆಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ತೆಲಂಗಾಣದ ಸೂರ್ಯಪೇಟೆಯ ಕೊಡದ್​ ಎಂಬಲ್ಲಿ ಈ ಪ್ರಕರಣ ನಡೆದಿದೆ.

ಅಪಹರಣ ಹಾಗೂ ಅತ್ಯಾಚಾರಕ್ಕೆ ಸಂಬಂಧಿಸಿದಂತೆ 20 ವರ್ಷದ ಯುವತಿಯೊಬ್ಬಳು ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರಾಜಕಾರಣಿಯ ಪುತ್ರ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ಪಕ್ಷದ ನಗರ ಸಭಾ ಸದಸ್ಯ ಟಿಆರ್​ಎಸ್​ನ ಮೊಹಮ್ಮದ್ ಖಾಜಾ ಎಂಬವರ ಪುತ್ರ ಶೇಖ್​ ಗೌಸ್​ ಪಾಷಾ ಮತ್ತು ಆತನ ಸ್ನೇಹಿತ ಸಾಯಿರಾಮ್​ ರೆಡ್ಡಿ ಬಂಧಿತ ಆರೋಪಿಗಳು.

ತಂಪುಪಾನೀಯದಲ್ಲಿ ಮತ್ತು ಬರಿಸುವ ಪದಾರ್ಥ ಬೆರೆಸಿ ಕುಡಿಸಿ ತನ್ನನ್ನು ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಅಪಹರಿಸಿದ್ದ ಇವರು ಬಳಿಕ ಎರಡು ದಿನ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಎಚ್ಚರ ಮರುಕಳಿಸಿದ ಬಳಿಕ ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದು, ಮನೆಯವರಿಗೆ ತಿಳಿಸಿ ನಂತರ ಪೊಲೀಸರಿಗೆ ದೂರು ನೀಡಿದ್ದಾಗಿ ಸಂತ್ರಸ್ತೆ ಸುದ್ದಿಗಾರರಿಗೆ ತಿಳಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net