ಚೆಕ್​ಪೋಸ್ಟ್​​ನಲ್ಲಿ 2ರೂ. ಹಣ ವಸೂಲಿ ಆರೋಪ: 37 ವರ್ಷಗಳ ನಂತರ ಆರೋಪಿಗಳ ಖುಲಾಸೆ

2 rupee
Published on

ಬೇಗುಸರಾಯ್‌: ವಾಹನ ಮಾಲೀಕರಿಂದ ತಲಾ ಎರಡು ರೂಪಾಯಿ ಲಂಚ ಪಡೆದ ಪ್ರಕರಣದ ಆರೋಪಿಗಳನ್ನು 37 ವರ್ಷಗಳ ಬಳಿಕ ನ್ಯಾಯಾಲಯವು ಖುಲಾಸೆಗೊಳಿಸಿದೆ.

ಇದನ್ನೂ ಓದಿ: ಮಹಿಳೆಯನ್ನು ಅರೆಬೆತ್ತಲೆಗೊಳಿಸಿ, ಹಲ್ಲೆ ಮಾಡಿ ಚಿನ್ನಾಭರಣ ದೋಚಿದ್ರು: ಎದೆಗುಂದದ ಆಕೆ ಮಾಡಿದ್ದಿಷ್ಟು..

ಕೈಲಾಶ್ ಶರ್ಮಾ, ರಾಮರತನ್ ಶರ್ಮಾ, ರಾಮ್ ಬಾಲಕ್ ರಾಯ್, ಜ್ಞಾನಿ ಶಂಕರ್ ಸಿಂಗ್ ಮತ್ತು ಯುಗೇಶ್ವರ್ ಮಹತೋ ಎಂಬ ಆರೋಪಿಗಳನ್ನು ನ್ಯಾಯಾಲಯವು ಖುಲಾಸೆಗೊಳಿಸಿದ್ದು, 1986ರ ಜೂನ್ 10ರಂದು ಬಿಹಾರದ ಬೇಗುಸರಾಯ್‌ನ ಲಾಕೋ ಚೆಕ್‌ಪೋಸ್ಟ್‌ನಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳು ಅಕ್ರಮ ವಸೂಲಿ ಮಾಡುತ್ತಿರುವ ಬಗ್ಗೆ ಅಂದಿನ ಎಸ್‌ಪಿ ಅರವಿಂದ್ ವರ್ಮಾ ಮಾಹಿತಿ ಪಡೆದಿದ್ದರು. ಕೂಡಲೇ ಅರವಿಂದ್​ ಶರ್ಮಾ, ವೃತ್ತ ನಿರೀಕ್ಷಕ ಸರಯುಗ್ ಬೈಠಾರೊಂದಿಗೆ ಲಾಕೋ ಚೆಕ್​​ ಪೋಸ್ಟ್​​​ ಬಳಿಯ ಪೆಟ್ರೋಲ್ ಪಂಪ್ ತಲುಪಿದ್ದರು.

ಕೂಡಲೇ ಅದೇ ಮಾರ್ಗವಾಗಿ ಚಲಿಸುತ್ತಿದ್ದ ಟ್ರಕ್ ಒಂದನ್ನು ತಡೆದಿದ್ದು, ಚಾಲಕನಿಗೆ ಸಹಿ ಮಾಡಿರುವ ಎರಡು ರೂಪಾಯಿ ನೋಟನ್ನು ಎಸ್ಪಿ ನೀಡಿ ಗಾಡಿಯಲ್ಲಿಯೇ ಕುಳಿತಿದ್ದರು. ಚೆಕ್​ಪೋಸ್ಟ್ ತಲುಪಿದ ನಂತರ, ಅಲ್ಲಿ ನಿಯೋಜಿಸಲಾದ ಕಾನ್​​ಸ್ಟೆಬಲ್​ ವಾಹನವನ್ನು ತಡೆದಿದ್ದು, ಅದೇ ಸಮಯಕ್ಕೆ ಡ್ರೈವರ್​ ಟ್ರಕ್‌ನಿಂದ ಕೆಳಗಿಳಿದು ಎಸ್‌ಪಿಯವರ ಸಹಿ ಇರುವ ಎರಡು ರೂಪಾಯಿ ನೋಟನ್ನು ಆ ಗೃಹರಕ್ಷಕ ದಳದ ರಾಮರತನ್ ಶರ್ಮಾಗೆ ನೀಡಿ ಇದರ ಬಗ್ಗೆ ಎಸ್ಪಿಗೆ ಮಾಹಿತಿ ತಿಳಿಸಿದ್ದ.

ಇದನ್ನೂ ಓದಿ: VIDEO | ಫುಟ್ಬಾಲ್ ಆಡುವಾಗಲೇ ಕಾಲು ಮುರಿದುಕೊಂಡ ಆಟಗಾರ

ಕೂಡಲೇ ಟ್ರಕ್‌ನಲ್ಲಿ ಸವಾರಿ ಮಾಡುತ್ತಿದ್ದ ಎಸ್‌ಪಿ ಸೇರಿದಂತೆ ಇತರ ಅಧಿಕಾರಿಗಳು ಇಳಿದು ಗೃಹರಕ್ಷಕ ದಳದ ಸಿಬ್ಬಂದಿಯನ್ನು ಪರಿಶೀಲನೆ ನಡೆಸಿದ್ದು, ರಾಮರತನ್ ಶರ್ಮಾರಿಂದ ಒಟ್ಟು ಎಂಟು ರೂಪಾಯಿಗಳು ಸಿಕ್ಕಿವೆ. ಅದರಲ್ಲಿ ಎಸ್ಪಿ ಸಹಿ ಮಾಡಿದ ಎರಡು ರೂಪಾಯಿಯ ನೋಟೂ ಇದ್ದು, ಇದಾದ ಬಳಿಕ ಬೇಗುಸರಾಯ್‌ನ ಮುಫಾಸಿಲ್ ಪೊಲೀಸ್ ಠಾಣೆಯಲ್ಲಿ ಎಲ್ಲರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿ ವಿಚಾರಣೆ ನಡೆದಿದ್ದು, 37 ವರ್ಷಗಳ ನಂತರ ಆರೋಪಿಗಳಿಗೆ ಬಿಡುಗಡೆ ಭಾಗ್ಯ ದೊರೆತಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net