VIDEO| ಫುಟ್ಬಾಲ್ ಆಡುವಾಗಲೇ ಕಾಲು ಮುರಿದುಕೊಂಡ ಆಟಗಾರ

football
Published on

ಅರ್ಜೆಂಟೀನಾ: ಆಟವಾಡುವಾಗ ಗಾಯಗಳಾಗುವುದ ಸಾಮಾನ್ಯ. ಆದರೆ ಇಲ್ಲೊಬ್ಬ ಆಟಗಾರ ಫುಟ್ಬಾಲ್​ ಆಡುವಾಗಲೇ ಕಾಲು ಮುರಿದುಕೊಂಡಿರುವ ಆಘಾತಕಾರಿ ಘಟನೆ ಅರ್ಜೆಂಟೀನಾದ ರಾಜಧಾನಿ ಬ್ಯೂನಸ್ ಐರಿಸ್‌ನಲ್ಲಿ ನಡೆದಿದೆ.

ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದ್ದು, ಈ ಘಟನೆಯು ಬ್ರೆಜಿಲ್ ಫ್ಲೂಮಿನೆನ್ಸ್ ಮತ್ತು ಅರ್ಜೆಂಟಿನೋಸ್ ಜೂನಿಯರ್ಸ್ ತಂಡಗಳು ಮುಖಾಮುಖಿಯಾಗಿದ್ದ ವೇಳೆ ಪಂದ್ಯದ 56ನೇ ನಿಮಿಷದಲ್ಲಿ ನಡೆದಿದೆ. ಅರ್ಜೆಂಟೀನೋಸ್ ಜೂನಿಯರ್ಸ್‌ನ ಲುಸಿಯಾನೊ ಸ್ಯಾಂಚೆಝ್, ಬ್ರೇಜಿಲ್​ ಆಟಗಾರ ಮಾರ್ಸೆಲೊ ವಶದಲ್ಲಿದ್ದ ಚೆಂಡನ್ನು ಕಸಿಯಲು ಧಾವಿಸಿದರು.

ಈ ವೇಳೆ ಆಯತಪ್ಪಿ ಮಾರ್ಸೆಲೊ ಎದುರಾಳಿ ಆಟಗಾರ ಲೂಸಿಯಾನೊ ಸ್ಯಾಂಚೆಝ್ ಅವರ ಎಡಗಾಲಿನ ಮೇಲೆ ಕಾಲಿಟ್ಟರು. ಕೂಡಲೇ ಆತನ ಎಡಕಾಲು ಟ್ವಿಸ್ಟ್ ಆಗಿ ನೆಲದ ಮೇಲೆ ಕುಸಿದಿದ್ದು. ಬಳಿಕ ಪರೀಕ್ಷಿಸಿದ ವೈದ್ಯರು ಆಟಗಾರನ ಕಾಲು ಮುರಿದಿರುವುದನ್ನು ಖಚಿತಪಡಿಸಿದ್ದಾರೆ. ಆದರೆ ಎದುರಾಳಿ ಕಾಲು ಮುರಿದಿದ್ದನ್ನು ಕಂಡ ಮಾರ್ಸೆಲೊಗೆ ರೆಡ್​ ಕಾರ್ಡ್​ ತೋರಿಸಿ ಪಂದ್ಯದಿಂದ ಹೊರಕಳುಹಿಸಲಾಯಿತು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net