ರಾತ್ರೋರಾತ್ರಿ ನಾಲ್ವರು ನಕ್ಸಲರನ್ನು ಗುಂಡಿಟ್ಟು ಕೊಂದ ರಕ್ಷಣಾ ಪಡೆ; ಓರ್ವ ಪೊಲೀಸ್​ ಹುತಾತ್ಮ

Police 9 May 20
Published on

ನವದೆಹಲಿ: ದೇಶದ ಗಡಿಯಲ್ಲಿ ಉಗ್ರರ ಹಾವಳಿಯಾದರೆ ಇನ್ನೊಂದೆಡೆ ದೇಶದ ಒಳಗೆ ನಕ್ಸಲರ ದಾಳಿ ಪ್ರಾರಂಭವಾಗಿದೆ. ಲಾಕ್​ಡೌನ್​ ನಡುವೆಯೂ ನಕ್ಸಲರು, ಉಗ್ರರ ಉಪಟಳ ಮಿತಿಮೀರುತ್ತಿದೆ.

ಛತ್ತೀಸ್​ಗಡ​ದ ರಾಜನಂದಗಾಂವ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ನಕ್ಸಲರು ಮತ್ತು ಪೊಲೀಸರ ನಡುವೆ ನಡೆದ ಗುಂಡಿನಚಕಮಕಿಯಲ್ಲಿ ಓರ್ವ ಸಬ್​ ಇನ್ಸ್​ಪೆಕ್ಟರ್​ ಮೃತಪಟ್ಟಿದ್ದಾರೆ. ಹಾಗೇ ನಾಲ್ವರು ಮಾವೋವಾದಿಗಳನ್ನೂ ಗುಂಡಿಕ್ಕಿ ಕೊಲ್ಲಲಾಗಿದೆ.

ಮನ್ಪುರ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಬರುವ ಪರೋಧೋನಿ ಗ್ರಾಮದಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ಮಧ್ಯೆ ದಾಳಿ-ಪ್ರತಿದಾಳಿ ನಡೆದಿತ್ತು.

ಗುಂಡಿನ ದಾಳಿಯಲ್ಲಿ ಸತ್ತ ನಾಲ್ವರು ನಕ್ಸಲರ ಮೃತದೇಹಗಳನ್ನು, ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

2009ರ ಜುಲೈ 12ರಂದು ಇದೇ ಸ್ಥಳದಲ್ಲಿ ಮಾವೋವಾದಿಗಳ ದಾಳಿಗೆ 29 ಪೊಲೀಸರು ಸಾವನ್ನಪ್ಪಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net