More

    ಸಿಗರೇಟ್ ವ್ಯಾಪಾರಕ್ಕೆ ಅವಕಾಶದ ಆಮಿಷ: ಸಿಸಿಬಿ ಎಸಿಪಿಗೆ 62 ಲಕ್ಷ ರೂ. ಲಂಚ

    ಬೆಂಗಳೂರು: ಲೌಕ್​ಡೌನ್ ವೇಳೆ ಸಿಗರೇಟ್ ಮಾರಾಟಕ್ಕೆ ಅನುಮತಿ ನೀಡುವುದಾಗಿ ನಂಬಿಸಿ ಸಿಸಿಬಿ ಎಸಿಪಿ ಪ್ರಭುಶಂಕರ್, ವ್ಯಾಪಾರಿಗಳಿಂದ 62.5 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

    ಏ.30ರಂದು ಕೆ.ಆರ್.ಪುರದಲ್ಲಿ ಸಿಗರೇಟ್ ವ್ಯಾಪಾರಿಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಆಗ ಎಸಿಪಿ ಪ್ರಭುಶಂಕರ್ ಲಂಚಾವತಾರ ಬೆಳಕಿಗೆ ಬಂದಿದೆ. ಇಲಾಖಾ ಮಟ್ಟದ ಆಂತರಿಕ ವಿಚಾರಣೆಯಲ್ಲಿ ಎಸಿಪಿ ಕೃತ್ಯ ಒಪ್ಪಿಕೊಂಡಿದ್ದು, ಲಂಚ ನೀಡಿದ ವ್ಯಾಪಾರಿ ಅದಿಲ್ ಅಜೀಜ್ ಹೇಳಿಕೆಯನ್ನೂ ಪಡೆಯಲಾಗಿದೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಸಿಸಿಬಿ ಡಿಸಿಪಿ ರವಿಕುಮಾರ್ ಶುಕ್ರವಾರ ವರದಿ ಸಲ್ಲಿಸಿದ್ದಾರೆ.

    ಇದನ್ನೂ ಓದಿ: ಲಾಕ್​ಡೌನ್ ವೇಳೆ ಹೆಚ್ಚಾಯ್ತು ಸೈಬರ್ ಕ್ರೈಂ!

    ಲಾಕ್​ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ಸಿಗರೇಟ್ ಮಾರಾಟವನ್ನು ಸರ್ಕಾರ ನಿಷೇಧಿಸಿತ್ತು. ಕೆಲವು ಸಿಗರೇಟ್ ವ್ಯಾಪಾರಿಗಳು ಅಕ್ರಮವಾಗಿ ಮಾರಾಟ ಮುಂದುವರಿಸಿದ್ದರು. ಈ ವಿಚಾರ ತಿಳಿದ ಪ್ರಭುಶಂಕರ್, ತನ್ನ ನಂಬಿಕಸ್ಥ ರಿಯಲ್​ಎಸ್ಟೇಟ್ ಏಜೆಂಟ್​ಗಳ ಮೂಲಕ ಸಿಗರೇಟ್ ವ್ಯಾಪಾರಿಗಳಿಂದ ಹಣ ಸುಲಿಗೆಗೆ ಪ್ಲಾ್ಯನ್ ರೂಪಿಸಿದ್ದರು. ನಗರದ ಪ್ರಮುಖ ಸಿಗರೇಟ್ ಸಗಟು ವ್ಯಾಪಾರಿಗಳಾದ ಎಂಕೆ ಆಂಡ್ ಸನ್ಸ್​ನ ಅದಿಲ್ ಅಜೀಜ್ ಸೇರಿ 8 ಮಂದಿಯನ್ನು ಸಂರ್ಪಸಿದ ಎಸಿಪಿ, ‘ನಿಮಗೆ ಸಿಗರೇಟ್ ಮಾರಾಟಕ್ಕೆ ಅವಕಾಶ ನೀಡುತ್ತೇನೆ. ಸಿಸಿಬಿಯಿಂದ ದಾಳಿ ನಡೆಸುವುದಿಲ್ಲ. ಪೊಲೀಸರಿಂದ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ’ ಎಂದು ಭರವಸೆ ನೀಡಿದ್ದರು. ಅದಕ್ಕೆ ಒಪ್ಪಿದ ವ್ಯಾಪಾರಿಗಳು, ಏಪ್ರಿಲ್ ಮೊದಲ ವಾರದಲ್ಲಿ 32.5 ಲಕ್ಷ ರೂ. ಲಂಚವನ್ನು ಎಸಿಪಿಗೆ ನೀಡಿದ್ದರು. ಅಕ್ರಮವಾಗಿ ಸಿಗರೇಟ್ ವಹಿವಾಟಿನ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಇನ್​ಸ್ಪೆಕ್ಟರ್​ಗಳಾದ ಅಜಯ್ ಹಾಗೂ ನಿರಂಜನ್ ಏ.30 ರಂದು ಕೆ.ಆರ್. ಪುರದಲ್ಲಿ ದಾಳಿ ನಡೆಸಿದ್ದರು.

    ಇದನ್ನೂ ಓದಿ: ಮನೆಯಲ್ಲಿ ಮಲಗಿದ್ದ 3 ವರ್ಷದ ಮಗುವನ್ನು ಹೊತ್ತೊಯ್ದು ಕೊಂದು ತಿಂದ ಚಿರತೆ

    ಸಿಸಿಬಿ ಪೊಲೀಸರ ವಿರುದ್ಧ ತಿರುಗಿಬಿದ್ದ ವ್ಯಾಪಾರಿಗಳು, ‘ನಮ್ಮಿಂದ ಹಣ ಪಡೆದು ದಾಳಿ ಮಾಡುತ್ತೀರಾ?’ ಎಂದು ಕಿಡಿಕಾರಿದ್ದರು. ಅನುಮಾನಗೊಂಡ ಪಿಐಗಳು ಈ ವಿಚಾರವನ್ನು ಡಿಸಿಪಿ ಕೆ.ಪಿ. ರವಿಕುಮಾರ್ ಗಮನಕ್ಕೆ ತಂದಿದ್ದರು. ತಕ್ಷಣವೇ ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಡಿಸಿಪಿ ಸೂಚಿಸಿದ್ದರು.

    ಈ ಬಗ್ಗೆ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸಹ ಡಿಸಿಪಿಯಿಂದ ವರದಿ ಪಡೆದಿದ್ದರು. ಅಷ್ಟರಲ್ಲಿ ಭೀತಿಗೊಳಗಾದ ಪ್ರಭುಶಂಕರ್, ಮತ್ತೆ ಸಿಗರೇಟ್ ವ್ಯಾಪಾರಿಗಳಿಗೆ ಪ್ರಕರಣದಲ್ಲಿ ಸಹಕರಿಸುವುದಾಗಿ ನಂಬಿಸಿ ಮತ್ತೆ 25 ಲಕ್ಷ ರೂ. ಸುಲಿಗೆ ಮಾಡಿದ್ದರು. ವ್ಯಾಪಾರಿ ಅದಿಲ್ ಅಜೀಜ್ ಎಸಿಪಿಗೆ ಹಣ ಕೊಟ್ಟಿದ್ದರು. ಈ ಲಂಚದ ಬಗ್ಗೆ ತಿಳಿದು ಆಯುಕ್ತರು, ಆಂತರಿಕ ವಿಚಾರಣೆ ನಡೆಸುವಂತೆ ರವಿಕುಮಾರ್ ಸೂಚಿಸಿದ್ದರು. ರಿಯಲ್ ಎಸ್ಟೇಟ್ ಉದ್ಯಮಿ ಮೂಲಕ ಸಿಗರೇಟ್ ವ್ಯಾಪಾರಿಗಳಿಂದ ಒಟ್ಟು 62.5 ಲಕ್ಷ ರೂ. ಪಡೆದಿರುವ ಬಗ್ಗೆ ಪುರಾವೆಗಳನ್ನು ಸಂಗ್ರಹಿಸಿ ಡಿಸಿಪಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.

    ಸಿಗರೇಟ್ ಡೀಲರ್​ಗಳಿಂದ ಲಂಚ ಪಡೆದ ಸಂಬಂಧ ಆಯುಕ್ತರಿಗೆ ವರದಿ ಸಲ್ಲಿಸಿ ಎಸಿಪಿ ಪ್ರಭುಶಂಕರ್ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಲಾಗಿದೆ.
    |ಸಂದೀಪ್ ಪಾಟೀಲ್ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ

    ವ್ಯಾಪಾರಿಗಳು ನೀಡಿದ್ದ ಹಣ ಜಪ್ತಿ

    ಸಿಗರೇಟ್ ವ್ಯಾಪಾರಿಗಳು ನೀಡಿದ್ದ 25 ಲಕ್ಷ ರೂ. ಬ್ಯಾಗ್ ಅನ್ನು ಎಸಿಪಿ ಪ್ರಭುಶಂಕರ್ ಬಳಿ ಜಪ್ತಿ ಮಾಡಲಾಗಿದೆ. ತನಿಖೆಗೆ ಹೆದರಿದ ಎಸಿಪಿ, ಸ್ವಯಂ ಹಣ ತಂದು ಡಿಸಿಪಿ ರವಿಕುಮಾರ್​ಗೆ ಒಪ್ಪಿಸಿದ್ದಾರೆ ಎಂದು ಗೊತ್ತಾಗಿದೆ.

    ಇದನ್ನೂ ಓದಿ: VIDEO| ಭಾರತದಲ್ಲಿ ಎರಡು ತಲೆ ಹಾವು ಪತ್ತೆ: ಇದರ ವಿಶೇಷತೆ ಕೇಳಿದ್ರೆ ಶಾಕ್ ಆಗ್ತೀರಾ!

    ಗಲಭೆಕೋರನಿಗೆ ನೆಗೆಟಿವ್, ಪತ್ನಿಗೆ ಪಾಸಿಟಿವ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts