ಪತ್ನಿ ಅಗಲಿಕೆ ನೋವು ತಾಳದೆ ಪ್ರಾಣ ಬಿಟ್ಟ ಕಾನ್ಸ್​ಟೇಬಲ್

jayappa
ಜಯಪ್ಪ
Published on

ಶಿವಮೊಗ್ಗ: ನಗರದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಮುಖ್ಯಪೇದೆಯೊಬ್ಬರು ಸಮವಸ್ತ್ರದಲ್ಲೇ ವಿನೋಬನಗರದ ತಮ್ಮ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೋಮವಾರ ಬೆಳಗ್ಗೆ ಕೆಲಸಕ್ಕೆ ಹಾಜರಾಗಿದ್ದ ಜಯಪ್ಪ ಅವರು ಮನೆಗೆ ವಾಪಸ್ ತೆರಳಿದ್ದರು. ಮೂರು ದಿನಗಳ ಹಿಂದೆ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತ್ನಿಯ ಅಗಲಿಕೆಯಿಂದ ತೀವ್ರವಾಗಿ ಮನನೊಂದಿದ್ದ ಜಯಪ್ಪ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕರ್ತವ್ಯಕ್ಕೆ ಹಾಜರಾಗಿದ್ದ ಜಯಪ್ಪ ಹಗ್ಗ ಖರೀದಿಸಿ ವಿನೋಬನಗರ ಚೌಕಿ ಬಳಿಯ ಚೌಡಪ್ಪ ಬಡಾವಣೆಯಲ್ಲಿರುವ ತಮ್ಮ ಮನೆಗೆ ತೆರಳಿ ಮನೆ ಮೇಲುಗಡೆ ಇರುವ ಶೀಟ್‌ಗೆ ಹಾಕಲಾಗಿದ್ದ ಬೀಮ್​ ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net