

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್ನಿಂದ ಹಾಲಿನ ಪಾಕೆಟ್ಗಳನ್ನು ಪೊಲೀಸ್ ಸಿಬ್ಬಂದಿಯೊಬ್ಬ ಕಳ್ಳತನ ಮಾಡಿದ್ದಾರೆ. ಇದು ಅಂಗಡಿ ಮುಂದೆ ಇದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ.
ವಿಡಿಯೋದಲ್ಲಿ ಏನಿದೆ?: ಪೊಲೀಸ್ ಗಸ್ತು ವಾಹನವನ್ನು ನಿಲ್ಲಿಸಿ, ಸಮೀಪದ ಅಂಗಡಿಯೊಂದರ ಮುಂದೆ ಜೋಡಿಸಲಾಗಿದ್ದ ಬಾಕ್ಸ್ಗಳಿಂದ ಹಾಲಿನ ಪಾಕೆಟ್ಗಳನ್ನು ಕದ್ದುಕೊಂಡು ವಾಹನ ಒಳಗೆ ಇಡುತ್ತಾರೆ. ವಾಹನದೊಳಗೆ ಮತ್ತೊಬ್ಬ ಸಿಬ್ಬಂದಿ ಇದ್ದಂತೆ ಕಾಣುತ್ತದೆ.
ಜನವರಿ 19ರ ನಸುಕಿನ ಜಾವದಲ್ಲಿ ಈ ಘಟನೆ ನಡೆದಿದ್ದು, ಕಳ್ಳರನ್ನು ಹಿಡಿಯಬೇಕಾದ ಪೊಲೀಸರೇ ಕಳ್ಳತನ ಮಾಡಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಗಾದೆ ಮಾತಿಗೆ ನಿಜವಾಗಿಯೂ ಪೂರಕವಾಗಿದೆ. (ಏಜೆನ್ಸೀಸ್)