ಪ್ರವಾಹ ಪೀಡಿತ ಪ್ರದೇಶದಿಂದ ಮಹಿಳೆ ಮತ್ತು ದೇವಿ ವಿಗ್ರಹವನ್ನು ಸಂರಕ್ಷಿಸಿದ ಪೊಲೀಸರು!

Untitled design - 2023-07-25T153847.107 (1)
Published on

ಜುನಾಗಢ, ಗುಜರಾತ್​: ಭಾರೀ ಮಳೆಯ ಹಿನ್ನಲೆ ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಗುಜರಾತ್​ನ ಜುನಾಗಢದಲ್ಲಿ ನಿರಂತರ ಮಳೆಯಿಂದ ನದಿ ಉಕ್ಕಿ ಹರಿದಿದೆ. ಈ ವೇಳೆ ಪ್ರವಾಹದಲ್ಲಿ ಸಿಲುಕಿದ ಮಹಿಳೆ ಮತ್ತು ಮುಳುಗಿ ಹೋಗುತ್ತಿದ್ದ ದೇವಿ ವಿಗ್ರಹವನ್ನು ಪೊಲೀಸರ ತಂಡ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರವಾಹದ ಪರಿಸ್ಥಿತಿ ಉಂಟಾದ ಪರಿಣಾಮ ನದಿಗಳು ಉಕ್ಕಿ ಹರಿಯುತ್ತಿದ್ದು, ಮಹಿಳೆಯೊಬ್ಬರು ನದಿಯಲ್ಲಿ ಸಿಲುಕಿ ಸಹಾಯ ಕೋರುತ್ತಿದ್ದುದನ್ನು ಗಮನಿಸಿದ ರಕ್ಷಣಾ ತಂಡವು, ಕೂಡಲೇ ಸ್ಥಳಕ್ಕೆ ತೆರಳಿ ಆಕೆಯನ್ನು ಸುರಕ್ಷಿತವಾಗಿ ಕರೆತರಲು ಪ್ರಯತ್ನಿಸಿದ್ದಾರೆ. ಆದ್ರೆ, ಮಹಿಳೆ ತನ್ನ ಗುಡಿಸಲಿನಲ್ಲಿ ಇದ್ದ ದೇವಿ ವಿಗ್ರಹವನ್ನು ಬಿಟ್ಟು ಬರಲು ನಿರಾಕರಿಸಿದ್ದಾರೆ. ನಾನು ಹತ್ತು ದಿನಗಳ ಉಪವಾಸವನ್ನು ಆಚರಿಸುತ್ತಿದ್ದೇನೆ ಮತ್ತು ತನ್ನ ಮನೆಯಿಂದ ಹೊರಬರಲು ಸಾಧ್ಯವಿಲ್ಲ ಎಂದು ಆಕೆ ಹೇಳಿದ್ದಾರೆ.

ರಕ್ಷಣಾ ತಂಡದ ಪೊಲೀಸರು ನಿರಂತರವಾಗಿ ಆಕೆಯನ್ನು ಮನವೊಲಿಸಿದ ಬಳಿಕ, ವಿಗ್ರಹದ ಜತೆಗೆ ಮಾತ್ರ ಬರುತ್ತೇನೆ ಎಂದು ಮಹಿಳೆ ಒಪ್ಪಿಕೊಂಡಿದ್ದಾರೆ. ಇದನ್ನು ಅರಿತ ಪೊಲೀಸರು, ಮಹಿಳೆ ಮತ್ತು ದೇವಿ ವಿಗ್ರಹವನ್ನು ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net