More

    ಗಗನಸಖಿ ಆತ್ಮಹತ್ಯೆ ಪ್ರಕರಣ: ಗೋಪಾಲ್ ಗೋಯಲ್ ಕಂಡಾ ದೋಷಮುಕ್ತ, ಯಾರು ಈ ಗೀತಿಕಾ ಶರ್ಮಾ?

    ದೆಹಲಿ: ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣದ ಮಾಜಿ ಸಚಿವ ಗೋಪಾಲ್ ಗೋಯಲ್ ಕಂಡಾ ಮತ್ತು ಅವರ ಸಹಾಯಕ ಅರುಣಾ ಛಡ್ಡಾ ಅವರನ್ನು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಮಂಗಳವಾರ ದೋಷಮುಕ್ತಗೊಳಿಸಿದೆ. ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ಕೋರ್ಟ್ ಹೇಳಿದೆ.

    ಗೋಪಾಲ್ ಗೋಯಲ್ ಕಂಡಾ
    ಕಂಡಾ, ಪ್ರಭಾವಿ ರಾಜಕಾರಣಿ ಮತ್ತು ಉದ್ಯಮಿ. ಹರಿಯಾಣ ಲೋಕಿತ್ ಪಕ್ಷದ ನಾಯಕ ಮತ್ತು ಹರಿಯಾಣದ ಸಿರ್ಸಾ ವಿಧಾನಸಭಾ ಕ್ಷೇತ್ರದ ಶಾಸಕ.

    ಏನಿದು ಪ್ರಕರಣ?
    ಗೀತಿಕಾ ಶರ್ಮಾ ಅವರು ಗೋಪಾಲ್ ಕಂಡಾ ಅವರ ವಿಮಾನಯಾನ ಸಂಸ್ಥೆ MDLR ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು. ನಂತರ ಗುರ್ಗಾಂವ್‌ನಲ್ಲಿರುವ ಕಂಡಾ ಅವರ ಕಾರ್ಪೊರೇಟ್ ಕಚೇರಿಯ ನಿರ್ದೇಶಕರಾಗಿ ನೇಮಕಗೊಂಡರು.

    ಆಗಸ್ಟ್ 5, 2012 ರಂದು, ಗೀತಿಕಾ ಶರ್ಮಾ ವಾಯುವ್ಯ ದೆಹಲಿಯಲ್ಲಿರುವ ತಮ್ಮ ತಂದೆಯ ಅಶೋಕ್ ವಿಹಾರ್ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡರು.

    ಶರ್ಮಾ ಬರೆದ ಎರಡು ಪುಟಗಳ ಆತ್ಮಹತ್ಯೆ ಪತ್ರದಲ್ಲಿ ಕಂಡಾ ಮತ್ತು ಆತನ ಉದ್ಯೋಗಿ ಅರುಣಾ ಚಡ್ಡಾ ಅವರ ಕಿರುಕುಳದಿಂದ ತನ್ನ ಜೀವನವನ್ನು ಮುಕ್ತಾಯಗೊಳಿಸುತ್ತಿರುವುದಾಗಿ ಆರೋಪಿಸಿದ್ದರು.

    306 (ಆತ್ಮಹತ್ಯೆಗೆ ಪ್ರಚೋದನೆ), 506 (ಅಪರಾಧ ಬೆದರಿಕೆ), 201 (ಸಾಕ್ಷ್ಯ ನಾಶ), 120ಬಿ (ಕ್ರಿಮಿನಲ್ ಪಿತೂರಿ), 466 (ನಕಲಿ) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕಂಡಾ ಅವರನ್ನು ದೆಹಲಿ ಪೊಲೀಸರು ಆಗಸ್ಟ್ 8, 2012 ರಂದು ಬಂಧಿಸಿದ್ದರು. ಅವರ ವಿರುದ್ಧ ಅತ್ಯಾಚಾರ (376) ಮತ್ತು 377 (ಅಸ್ವಾಭಾವಿಕ ಲೈಂಗಿಕತೆ) ಆರೋಪಗಳನ್ನು ಸಹ ದಾಖಲಿಸಲಾಯಿತು. ಪ್ರಕರಣ ದಾಖಲಾದ ನಂತರ, ಗೃಹ ಸಚಿವರಾಗಿದ್ದ ಕಂಡಾ ರಾಜೀನಾಮೆ ನೀಡಬೇಕಾಯಿತು. ಅವರು ನಗರ ಸಂಸ್ಥೆಗಳು, ಉದ್ಯಮ ಮತ್ತು ವಾಣಿಜ್ಯ ಖಾತೆಗಳನ್ನು ಸಹ ಹೊಂದಿದ್ದರು.

    ಹಳೆಯ ಫೋಟೋ ಹಂಚಿಕೊಂಡು ಲಿಪ್ ಫಿಲ್ಲರ್ಸ್, ವೈದ್ಯರ ಬಗ್ಗೆ ಮಾತನಾಡಿದ ಉರ್ಫಿ; ನಿಮಗೆ ಧೈರ್ಯ ಜಾಸ್ತಿ ಅಂದ್ರು ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts