

ಆನೇಕಲ್: ಹೆಬ್ಬಗೋಡಿ ಠಾಣೆ ಪೊಲೀಸರು ಕಳ್ಳತನ ಆರೋಪದಲ್ಲಿ ಬಂಧಿಸಿದ ನಾಲ್ವರ ಪೈಕಿ ಇಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಠಾಣೆಯ 15 ಪೊಲೀಸರನ್ನೂ ಕ್ವಾರಂಟೈನ್ ಮಾಡಲಾಗಿದೆ.
ಮೇ 16ರಂದು ಜೆ.ಜೆ. ನಗರದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆನೇಕಲ್ ಕೋರ್ಟ್ಗೆ ಆರೋಪಿಗಳನ್ನು ಹಾಜರುಪಡಿಸಿ ಕರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. ಮಂಗಳವಾರ ಬಂದ ವರದಿಯಲ್ಲಿ ಇಬ್ಬರಿಗೆ ಸೋಂಕಿರುವುದು ದೃಢಪಟ್ಟಿದೆ. ಇನ್ನಿಬ್ಬರ ವರದಿ ಬರಬೇಕಿದೆ.
ರೈಲು ನಿಲ್ದಾಣದಲ್ಲಿ ಪೇದೆ ಬೈಕ್ ಕಳವು!
ಬೆಂಗಳೂರು: ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಪೊಲೀಸ್ ಪೇದೆಯ ಬೈಕ್ ಕಳವಾಗಿದೆ. ಅರಸೀಕೆರೆ ರೈಲ್ವೆ ಪೊಲೀಸ್ ಪೇದೆ ದಿಲೀಪ್ಕುಮಾರ್ ಬೈಕ್ ಕಳೆದುಕೊಂಡವರು. ನಿಲ್ದಾಣದ ಬಂದೋಬಸ್ತ್ಗೆ ನಿಯೋಜನೆಗೊಂಡಿದ್ದ ದಿಲೀಪ್, ನಗರದಲ್ಲಿದ್ದ ಮಾವನ ಮನೆಯಿಂದ ಪ್ರತಿದಿನ ಬೈಕ್ನಲ್ಲಿ ಬಂದು ಮುಂಗಡ ಬುಕಿಂಗ್ ಕೇಂದ್ರದ ಪಕ್ಕ ನಿಲುಗಡೆ ಮಾಡುತ್ತಿದ್ದರು. ಮೇ 14ರಂದು ಕಳವಾಗಿದೆ.