

ಹೊಸೂರು: ಕರ್ತವ್ಯ ನಿರತ ಸಂಚಾರ ಪೊಲೀಸ್ ಪೇದೆಗೆ ಲಾರಿ ಡಿಕ್ಕಿಯಾಗಿ, ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಅತ್ತಿಬೆಲೆ-ಜೂಜವಾಡಿಯಲ್ಲಿ ನಡೆದಿದೆ.
ಕರ್ನಾಟಕ-ತಮಿಳುನಾಡು ಮುಖ್ಯ ಹೆದ್ದಾರಿಯ ಜೂಜುವಾಡಿ ಚೆಕ್ಪೋಸ್ಟ್ ಬಳಿ ಈ ಮುಖ್ಯಪೇದೆ ಕರ್ತವ್ಯದಲ್ಲಿದ್ದರು. ರಸ್ತೆ ಪಕ್ಕ ನಿಂತಿದ್ದ ಅವರಿಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪೇದೆಯ ತಲೆ ಪೂರ್ತಿ ಕಟ್ ಆಗಿದ್ದು, ಭೀಕರವಾಗಿ ಸಾವನ್ನಪ್ಪಿದ್ದಾರೆ. (ದಿಗ್ವಿಜಯ ನ್ಯೂಸ್)