ಕಸಾಯಿಖಾನೆ ಪಾಲಾಗುತ್ತಿದ್ದ ಕರುವನ್ನು ರಕ್ಷಿಸಿದ ಪೊಲೀಸರು: ‘ಭೀಮ’ ಎಂದು ಹೆಸರಿಟ್ಟು ಸಾಕುತ್ತಿರುವ ಮುಸ್ಲಿಂ ಠಾಣಾಧಿಕಾರಿ!

Police 20 April 20
Published on

ಬೆಂಗಳೂರು: ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದ ಕರುವನ್ನು ರಕ್ಷಿಸಿರುವ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಅದಕ್ಕೆ ‘ಭೀಮ’ ಎಂದು ನಾಮಕರಣ ಮಾಡಿದ್ದಲ್ಲದೆ ಸಾಕುವ ಹೊಣೆಯನ್ನೂ ತಾವೇ ನಿಭಾಯಿಸುತ್ತಿದ್ದಾರೆ.

ಮಾ. 30ರಂದು ಸಬ್ ಇನ್‌ಸ್ಪೆಕ್ಟರ್ ನಾಗರಾಜ್ ಮತ್ತು ಸಿಬ್ಬಂದಿ ಠಾಣೆ ಮುಂಭಾಗ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅದೇ ಮಾರ್ಗವಾಗಿ ಬಂದ ಕಾರೊಂದನ್ನು ತಡೆದಿದ್ದರು. ಪರಿಶೀಲಿಸಿದಾಗ ಪ್ಲಾಸ್ಟಿಕ್ ಚೀಲದಲ್ಲಿ ಕರುವನ್ನು ಕಟ್ಟಿ ಅದರಲ್ಲಿ ಸಾಗಿಸುತ್ತಿದ್ದುದು ಕಂಡುಬಂತು. ಕೆಳಗಿಳಿಸಿ ನೋಡುತ್ತಿದ್ದಾಗ ಚಾಲಕ ಪರಾರಿಯಾಗಿದ್ದ. ಬಿಳಿ ಮತ್ತು ಕಂದು ಬಣ್ಣದ ಎರಡು ದಿನದ ಗಂಡು ಕರುವಿಗೆ ಠಾಣಾಧಿಕಾರಿ ಮಹಮದ್ ರಫಿ ಅವರು ‘ಭೀಮ’ ಎಂದು ನಾಮಕರಣ ಮಾಡಿದ್ದಾರೆ.

ಸದ್ಯ ಕರುವನ್ನು ಠಾಣೆಯ ಆವರಣದಲ್ಲಿ ಪಾಲನೆ ಮಾಡಲಾಗುತ್ತಿದೆ. ಪ್ರತಿನಿತ್ಯ ಹಾಲು, ಬೆಲ್ಲ, ಬೇಳೆ ಕಾಳುಗಳನ್ನು ನೆನಸಿ ಮೇವಿನ ಜತೆಗೆ ನೀಡಲಾಗುತ್ತಿದೆ. ಪ್ರತಿನಿತ್ಯ ಪಶು ವೈದ್ಯರು ಠಾಣೆಗೆ ಬಂದು ಕರುವಿನ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net