

ಲಂಡನ್: ಬ್ರಿಟನ್ ನ ಮ್ಯಾಂಜೆಸ್ಟರ್ ವಿಮಾನ ನಿಲ್ದಾಣದಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ತುರ್ತು ಚಿಕಿತ್ಸಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ನಾಲ್ವರು ಪ್ರಯಾಣಿಕರ ಮೇಲೆ ಪೊಲೀಸರು ಕ್ರೌರ್ಯ ಮೆರೆದಿದ್ದಾರೆ. ಈ ಅಮಾನವೀಯ ಘಟನೆ ಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.
ಮ್ಯಾಂಚೆಸ್ಟರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಾಲ್ವರು ಸಾರ್ವಜನಿಕರು ಮತ್ತು ಅಲ್ಲಿದ್ದ ತುರ್ತು ಚಿಕಿತ್ಸಾ ಸಿಬ್ಬಂದಿ ನಡುವೆ ಸಣ್ಣವಿಷಯಕ್ಕೆ ವಾಗ್ವಾದ ನಡೆದಿದ್ದು, ಜಗಳಕ್ಕೆ ಕಾರಣವಾಗಿದೆ. ಆಗ ಆ ನಾಲ್ವರು, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಅಲ್ಲಿಗೆ ಬಂದ ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಇದರಿಂದ ಕುಪಿತಗೊಂಡ ಪೊಲೀಸರು ಪ್ರಯಾಣಿಕರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಒಬ್ಬ ಪ್ರಯಾಣಿಕನ ಕಣ್ಣಿಗೆ ಪೊಲೀಸ್ ಪೆಪ್ಪರ್ ಸ್ಪ್ರೇ ಹಾಕಿ ನೆಲಕ್ಕೆ ತಳ್ಳಿ ಬೂಟು ಕಾಲಿನಿಂದ ಒದ್ದಿದ್ದಾರೆ.
ಅಷ್ಟಕ್ಕೇ ಬಿಡದೆ ಆ ಪ್ರಯಾಣಿಕನ ತಲೆಗೆ ತನ್ನ ಕಾಲುಗಳಿಂದ ಒದ್ದಿದ್ದು, ನಂತರ ಅವರನ್ನು ಬಂಧಿಸಲಾಗಿದೆ. ಅಲ್ಲಿದ್ದವರೆಲ್ಲ ಪೊಲೀಸರ ವರ್ತನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಕಾಲಮಾನ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪೊಲೀಸರು ಪ್ರಯಾಣಿಕರೊಂದಿಗೆ ಈ ರೀತಿ ವರ್ತಿಸುತ್ತಿರುವುದು ನಿಜಕ್ಕೂ ಸರಿಯಲ್ಲ. ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಬೇಕಿತ್ತು’ ಎಂದು ನೆಟಿಜನ್ಗಳು ಕಮೆಂಟ್ ಮಾಡಿದ್ದಾರೆ.