

ಬೆಂಗಳೂರು: ಬೆಳಗಾವಿ ವಿಧಾನಮಂಡಲ ಅಧಿವೇಶನದ ಕೊನೆಯ ದಿನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿಯ ಸಿ.ಟಿ. ರವಿ ಅವಾಚ್ಯ ಪದ ಬಳಸಿದ್ದಾರೆಂಬ ಪ್ರಕರಣ ಮುಗಿದ ಅಧ್ಯಾಯ. ಸದನದ ಒಳಗಿನ ಪ್ರಕರಣದಲ್ಲಿ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ. ಇದೇ ಕಾರಣಕ್ಕೆ ಮಹಜರು ಮಾಡಲು ಅನುಮತಿ ನೀಡಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಬೆಂಗ ಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು. ಸಿಟಿ ರವಿ ಅವರ ಮೇಲೆ ಹಲ್ಲೆಗೆ ಯತ್ನಿಸಿದವರ ಮೇಲೆ ಕ್ರಮ ಕೈಗೊಳ್ಳಲು ಬೆಳಗಾವಿ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಪೊಲೀಸರು ಪರಿಷತ್ ಸಭಾಂಗಣ ಮಹಜರು ಮಾಡುವುದಾಗಿ ನನ್ನ ಅನುಮತಿ ಕೇಳಿದ್ದರು. ಆದರೆ ಸದನದೊಳಗೆ ಪೊಲೀಸರು ಹಸ್ತಕ್ಷೇಪ ಮಾಡಬಾರದೆಂಬ ಕಾರಣಕ್ಕೆ ನಾನು ಅನುಮತಿ ಕೊಟ್ಟಿಲ್ಲ. ಈ ವಿಚಾರದಲ್ಲಿ ಪೊಲೀಸರಿಗೆ ಅಧಿಕಾರವೂ ಇಲ್ಲ, ಹಕ್ಕೂ ಇಲ್ಲ. ಎಫ್ಐಆರ್ ಆಗಿದೆ, ಆದರೆ ಪೊಲೀಸರು ಸದನದೊಳಗೆ ಬಂದಿಲ್ಲ. ನಾವು ನಮ್ಮದೇ ಮೂಲಗಳ ಪ್ರಕಾರ ಚರ್ಚೆ ಮಾಡುತ್ತೇವೆ ಎಂದರು. ಸದನ ಮುಂದೂಡಿದ ನಂತರ ಸಭಾಂಗಣದಲ್ಲಿ ನಡೆದ ಘಟನೆ ಬಗ್ಗೆ ವಿವರವಾಗಿ ಚರ್ಚೆ ಮಾಡಲಾಗಿದೆ. ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ಸದಸ್ಯ ಸಿ.ಟಿ. ರವಿ ಬಂಧನ ಆಗಿತ್ತು. ನನಗೆ ಎರಡೂ ಕಡೆಯಿಂದಲೂ ದೂರು ಬಂದಿಲ್ಲ ಎಂದು ಹೊರಟ್ಟಿ ಹೇಳಿದರು.
ಪೊಲೀಸರ ಜತೆ ಸಂಪರ್ಕ: ಘಟನೆ ನಡೆದ ದಿನ ಮಧ್ಯರಾತ್ರಿ 1 ಗಂಟೆ ತನಕವೂ ಸಿ.ಟಿ.ರವಿ ಜತೆ ಸಂಪರ್ಕದಲ್ಲಿದ್ದೆ. ಮೂರು ಬಾರಿ ರವಿ ಜತೆ ಮಾತನಾಡಿದ್ದೆ. ಪೊಲೀಸ್ ಆಯುಕ್ತರ ಜತೆ ಮಾತನಾಡಿ ಎಚ್ಚರಿಕೆ ಸಹ ಕೊಟ್ಟಿದ್ದೆ. ಸಿ.ಟಿ. ರವಿಗೆ ಏನಾದರೂ ತೊಂದರೆಯಾದರೆ ಸುಮ್ಮನೆ ಬಿಡುವುದಿಲ್ಲ ಎಂದು ಪೊಲೀಸ್ ಆಯುಕ್ತರಿಗೆ ನೇರವಾಗಿಯೇ ಹೇಳಿದ್ದೇನೆ. ಬೆಳಗ್ಗೆ ತನಕವೂ ಪೊಲೀಸರನ್ನು ಟ್ರಾ್ಯಕ್ ಮಾಡಿದ್ದೇನೆ. ಬೆಳಗಿನ ಜಾವ 5 ಗಂಟೆಗೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜತೆ ಮಾತನಾಡಿದ್ದ್ದೆ ಎಂದು ಹೊರಟ್ಟಿ ವಿವರಿಸಿದರು. ಹಿರೇಬಾಗೇವಾಡಿಯಲ್ಲಿ ಸಿಟಿ ರವಿ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಾದ ಬಗ್ಗೆ ಪ್ರತಿಕ್ರಿಯಿಸಿದ ಹೊರಟ್ಟಿ ಅವರು, ಪೊಲೀಸ್ ಕಾಯ್ದೆಗಳು ಏನಿದೆಯೋ ಗೊತ್ತಿಲ್ಲ. ಹಲ್ಲೆಗೆ ಯತ್ನಿಸಿದವರ ವಿರುದ್ಧ ಅವರು ಕ್ರಮ ತೆಗೆದುಕೊಳ್ಳಬಹುದು ಎಂದರು.
ಹಕ್ಕುಚ್ಯುತಿ ಆಗಿದೆಯೇ?: ಸಿಟಿ ರವಿ ಬಂಧನ ವಿಚಾರದಲ್ಲಿ ಹಕ್ಕುಚ್ಯುತಿ ಆಗಿದೆ ಎಂದು ಯಾರಾದರೂ ದೂರು ಕೊಟ್ಟರೆ ಪರಿಶೀಲಿಸಿ ಹಕ್ಕುಬಾಧ್ಯತಾ ಸಮಿತಿಗೆ ಕಳುಹಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಘಟನೆಗೆ ಸಂಬಂಧಿಸಿದಂತೆ ಹೊರಗಿನ ವಿಚಾರಕ್ಕೆ ದೂರು ಕೊಟ್ಟಿದ್ದರೆ ಅದರ ಬಗ್ಗೆ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಹೊರಟ್ಟಿ ಸ್ಪಷ್ಟಪಡಿಸಿದರು.
ಸಮಿತಿ ರಚನೆ ಅಗತ್ಯವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿಂದನೆ ಪ್ರಕರಣದ ವಿಚಾರಣೆಗೆ ಯಾವುದೇ ಸಮಿತಿ ರಚಿಸುವ ಅಗತ್ಯವಿಲ್ಲ. ಸದನದಲ್ಲಿ ನಿಯಂತ್ರಣ ಮೀರಿ ಘಟನೆ ನಡೆದಿದ್ದರೆ ಸಮಿತಿ ರಚನೆ ಮಾಡಬಹುದಿತ್ತು. ಈಗ ಅಗತ್ಯವೇನೂ ಇಲ್ಲ. ಶಾಸಕಾಂಗದಲ್ಲಿ ಇಂತಹ ಘಟನೆಗಳು ನಡೆದರೆ ಮೌಲ್ಯಗಳು ಉಳಿಯುವುದಿಲ್ಲ. ಈವರೆಗೆ ಒಳ್ಳೆಯ ಕಾಲವಿತ್ತು. ಆದರೆ ಮುಂದೆ ಹೇಗೋ ಏನೋ ಎಂದು ಹೊರಟ್ಟಿ ಬೇಸರ ಹೊರಹಾಕಿದರು.
ಆಯೋಗಕ್ಕೆ ಅಧಿಕಾರವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿಂದನೆ ಆರೋಪ ಪ್ರಕರಣದಲ್ಲಿ ಸಭಾಪತಿಯನ್ನು ಪ್ರಶ್ನಿಸುವ ಅಧಿಕಾರ ಮಹಿಳಾ ಆಯೋಗಕ್ಕೆ ಇಲ್ಲ. ಅವರು ಪತ್ರ ಬರೆಯಲಿ, ಆದಕ್ಕೆ ಉತ್ತರ ನೀಡುವ ಅಗತ್ಯವೇನೂ ಇಲ್ಲ ಎಂದು ಹೊರಟ್ಟಿ ಅಭಿಪ್ರಾಯಪಟ್ಟರು.
ಸಾಕ್ಷ್ಯಗಳಿದ್ದರೆ ಪರಿಗಣನೆ: ಸದನದೊಳಗೆ ಯಾವುದೇ ಘಟನೆ ನಡೆದಾಗ ಅಲ್ಲಿ ಆಡಿಯೋ ಅಥವಾ ವೀಡಿಯೋ ದಾಖಲಾಗಿದ್ದರೆ ಮಾತ್ರ ಪರಿಗಣಿಸುತ್ತೇವೆ. ಬೇರೆ ಕಡೆಯಿಂದ ಬರುವ ಯಾವುದೇ ವೀಡಿಯೋ ಅಥವಾ ಆಡಿಯೋ ಎಫ್ಎಸ್ಎಲ್ಗೆ ಕಳುಹಿಸಿ ವರದಿ ಪಡೆಯಬೇಕಾಗುತ್ತದೆ. ಸದನ ಮುಂದೂಡಿದ ನಂತರ ಯಾವುದೇ ವೀಡಿಯೋ ದಾಖಲಾಗಿಲ್ಲ ಎಂದು ಸಭಾಪತಿ ಹೊರಟ್ಟಿ ಸ್ಪಷ್ಟಪಡಿಸಿದರು.
ವೈಯಕ್ತಿಕ ಅಭಿಪ್ರಾಯ: ರವಿ ಅವರನ್ನು ಎನ್ಕೌಂಟರ್ ಮಾಡಲು ಪ್ರಯತ್ನಿಸಲಾಗಿದೆ ಎಂಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ಉತ್ತರ ನೀಡಿದ ಹೊರಟ್ಟಿ, ಈ ವಿಚಾರದಲ್ಲಿ ನನಗೆ ಮಾಹಿತಿ ಇಲ್ಲ. ನನ್ನ ಮುಂದೆ ಯಾರೊಬ್ಬರೂ ಹೇಳಿಕೆ
ನನಗೆ ಅನ್ಯಾಯ ಆಗಿದೆ. ನನ್ನ ವಿರುದ್ಧ ಅವಾಚ್ಯ ಪದ ಬಳಸಿರುವ ಸಿ.ಟಿ. ರವಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡುವೆ. ಪ್ರಕರಣದಿಂದ ಹಿಂದೆ ಸರಿಯುವ ಮಾತೇ ಇಲ್ಲ.
| ಲಕ್ಷ್ಮೀ ಹೆಬ್ಬಾಳ್ಕರ್ ಸಚಿವೆ