ಬೀದಿ ಬದಿ ವ್ಯಾಪಾರಿಗಳಿಗೆ ಪೊಲೀಸರ ಕಿರುಕುಳ; ಸಿಎಂಗೆ  ದೂರು

imresizer-1701065732314
Published on

ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳಿಗೆ, ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡುವವರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ವ್ಯಾಪಾರಿ ನಿಂಗಮ್ಮ ದುಮ್ಮಾನ‌ತೋಡಿಕೊಂಡರು.

ಜನ ಸ್ಪಂದನಕ್ಕೆ ಆಗಮಿಸಿದ್ದ ಅವರು, ಪೊಲೀಸ್ ಮತ್ತು ಬಿಬಿಎಂಪಿ ಅಧಿಕಾರಿಗಳ ಕಿರುಕುಳದ ಬಗ್ಗೆ ದೂರು ನೀಡಿದರು.

ತಕ್ಷಣ ಪೊಲೀಸ್ ಅಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳನ್ನು ಕರೆಸಿದ ಸಿಎಂ ನಿಂಗಮ್ಮ‌ ಅವರಿಗೆ ಕಿರುಕುಳ ತಪ್ಪಿಸುವಂತೆ ಸೂಚನೆ ನೀಡಿದರು.

ಅದೇ ರೀತಿ 148 ಮಂದಿ ವಿಶೇಷ ಚೇತನರಿಂದ ಮೂರು ಚಕ್ರ ವಾಹನಕ್ಕೆ ಬೇಡಿಕೆ ಇಟ್ಟರು. ಸಿಡಾಕ್ ಸಂಸ್ಥೆಯಿಂದ ತರಬೇತಿ ಪಡೆದಿದ್ದರೂ ಎರಡು ವರ್ಷದಿಂದ ನೆರವು ನೀಡಿಲ್ಲ ಎಂದು ದೂರಿದರು.

ತರಬೇತಿ ಪಡೆದಿರುವ 98 ಮಂದಿಗೆ ಮುಂದಿನ 15 ದಿನಗಳ ಒಳಗೆ ಸಾಲ ಸೌಲಭ್ಯ ಒದಗಿಸಬೇಕು. ಉಳಿದವರಿಗೆ ತ್ರಿಚಕ್ರ ವಾಹನ ಕೊಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎನ್ನುವ ಖಡಕ್ ಸೂಚನೆಯನ್ನು ಮುಖ್ಯಮಂತ್ರಿಯವರು  ಬಿಬಿಎಂಪಿ ಆಯುಕ್ತ ತುಷಾರ ಗಿರಿನಾಥ್ ಅವರಿಗೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net