ಪೊಲೀಸ್ ಪರೀಕ್ಷೆ: ಡಿಪ್ಲೊಮಾ ಸಿಇಟಿ, ಪಿಜಿಸಿಇಟಿ ವೇಳಾಪಟ್ಟಿ ಬದಲು

exam
Published on

ಬೆಂಗಳೂರು: 2023ನೇ ಸಾಲಿನ ಎರಡನೇ ಅಥವಾ ಮೂರನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ನಡೆಸುವ ಡಿಪ್ಲೊಮಾ ಸಿಇಟಿ ಪರೀಕ್ಷೆ ಯನ್ನು ಸೆ.10ರ ಬದಲಿಗೆ ಸೆ.9ರಂದು ನಡೆಸುವುದಾಗಿ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರು ತಿಳಿಸಿದ್ದಾರೆ.

ಸೆ.10ರಂದು ಪೊಲೀಸ್ ಇಲಾಖೆಯ ಪರೀಕ್ಷೆ ಇರುವ ಕಾರಣ ಒಂದು ದಿನ ಮೊದಲೇ ಪರೀಕ್ಷೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪಿಜಿಸಿಇಟಿ ಪರೀಕ್ಷೆ ಮುಂದಕ್ಕೆ

ಎಂಬಿಎ, ಎಂಸಿಎ, ಎಂ.ಟೆಕ್ ಸೇರಿ ಇತರ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಸೆ.9 ಮತ್ತು 10 ರಂದು ನಡೆಸಬೇಕಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಕೂಡ ಮುಂದೂಡಲಾಗಿದೆ. ಈ ದಿನಾಂಕಗಳಂದು ಪೊಲೀಸ್ ಇಲಾಖೆ ಪರೀಕ್ಷೆ ಇರುವ ಕಾರಣ ಈ ಪರೀಕ್ಷೆ ಮುಂದೂಡಿದ್ದು, ಹೊಸ ದಿನಾಂಕಗಳನ್ನು ಸದ್ಯದಲ್ಲಿಯೇ ವೆಬ್‌ಸೈಟ್ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net