ಮಾಲೀಕನ ಒತ್ತಡಕ್ಕೆ ಮಣಿದು ಕಾಲ್ನಡಿಗೆಯಲ್ಲಿ ಕೇರಳಕ್ಕೆ ಹೊರಟಿದ್ದ ಕಾರ್ಮಿಕರು...ಆದರೆ ಊರು ತಲುಪಲು ಆಗಲೇ ಇಲ್ಲ..!

Karmikaru 26 april 20
Published on

ಮಡಿಕೇರಿ: ಕೊಡಗಿನಿಂದ ಕೇರಳಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ನಾಲ್ವರು ಕಾರ್ಮಿಕರಿಗೆ ಕೊನೆಗೂ ಊರು ತಲುಪಲು ಸಾಧ್ಯವಾಗಲಿಲ್ಲ.

ಚೆಂಬೆಬೆಳ್ಳೂರು ಗ್ರಾಮದ ಚೇಂದಂಡ ಬಿದ್ದಪ್ಪ ಎಂಬುವರ ತೋಟದಲ್ಲಿ ಈ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅಂತಾರಾಜ್ಯ ಕಾರ್ಮಿಕರು ಇದ್ದಲ್ಲೇ ಇರಬೇಕು ಆದೇಶ ಇದ್ದರೂ ಮಾಲೀಕ ಅವರನ್ನು ಊರಿಗೆ ಕಳಿಸಿದ್ದ. ಕೇರಳಕ್ಕೆ ತೆರಳುವಂತೆ ಮಾಲೀಕ ಒಂದೇ ಸಮನೆ ಒತ್ತಡ ಹೇರಿದ್ದರಿಂದಲೇ ಅವರೆಲ್ಲ ತಮ್ಮ ಊರಿಗೆ ಹೋಗುತ್ತಿದ್ದರು.

ಪೊಲೀಸರ ಭಯದಿಂದ ಅವರೆಲ್ಲ ಅರಣ್ಯ ಪ್ರದೇಶದ ಮೂಲಕ ಸಾಗುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿರಾಜಪೇಟೆ ಪೊಲೀಸರು, ಕಾರ್ಮಿಕರನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net