ಸೋಂಕಿತರ ಸಂಪರ್ಕಕ್ಕೆ ಬಂದಿದ್ದರೂ ಬಹಿರಂಗಪಡಿಸದ ಇಬ್ಬರ ಮೇಲೆ ಪೊಲೀಸ್ ಕೇಸ್!

Coronavirus 16 march 20
Published on

ಕೊಪ್ಪಳ: ಕರೊನಾ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದರೂ, ಸರ್ಕಾರದ ಗಮನಕ್ಕೆ ತರದೆ ನಿಯಮ ಉಲ್ಲಂಘನೆ ಮಾಡಿದ ಆರೋಪದಲ್ಲಿ ಇಬ್ಬರ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿಯ ಪಿ-194 ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಈತ ಪ್ರಯಾಣಿಸಿದ ಬಸ್‌ನಲ್ಲಿ ಪ್ರಯಾಣಿಸಿದ ಶಿಖಾ ಸೇಠ್ ಮತ್ತು ಆಕೆಯನ್ನು ಕೊಪ್ಪಳಕ್ಕೆ ಕರೆಸಿ, ಮರಳಿ ಮುಂಬೈಗೆ ಕಳಿಸಲು ಯತ್ನಿಸಿದ ಬಿಜೆಪಿ ಮುಖಂಡ ಗುರುಬಸವರಾಜ ಹೊಳಗುಂದಿ ಆರೋಪಿತರು.

ಸದ್ಯ ಮಹಿಳೆಯನ್ನು ಐಸೋಲೇಶನ್ ಮಾಡಿ, ಪರೀಕ್ಷೆಗೆ ಸ್ಯಾಂಪಲ್ ಕಳಿಸಲಾಗಿದೆ. ಇವರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net