

ಮುಂಬೈ: ಜಿಮ್ಗೆ ಬರುತ್ತಿದ್ದ ಮಹಿಳೆ ಒಬ್ಬರಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಮುಂಬೈ ಪೊಲೀಸರು ಬಾಲಿವುಡ್ ನಟ ಸಾಹಿಲ್ ಖಾನ್ ಮತ್ತು ಮಹಿಳೆ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.
43 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
2023ರ ಫೆಬ್ರವರಿ ತಿಂಗಳಲ್ಲಿ ದೂರುದಾರರು ಮಹಿಳೆ ಹಾಗೂ ಮಹಿಳೆ ನಡುವೆ ಹಣಕ್ಕಾಗಿ ಜಗಳ ನಡೆದಿತ್ತು. ಈ ವೇಳೆ ತನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಮಾನ ಕಳೆಯುವುದಾಗಿ ಮಹಿಳೆ ಬೆದರಿಕೆ ಹಾಕಿದ್ದರು.
ಆರೋಪಿ ಮಹಿಳೆ ಹಾಗೂ ಸಾಹಿಲ್ ಸಾಮಾಜಿಕ ಜಾಲತಾಣಳಲ್ಲಿ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರ ಫೋಟೋಗಳನ್ನು ಹಾಕಿ ಅವಹೇಳನ ಮಾಡಿದ್ಧಾರೆ ಎಂದು ಮಹಿಳೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ಧಾರೆ.
ಇನ್ನು ಮಹಿಳೆ ಈ ಕುರಿತು ಓಶಿವಾರ ಪೊಲೀಸ್ ಠಾಣೆಯಲ್ಲಿ ದುರು ದಾಖಲಿಸಿದ್ದು ಪೊಲೀಸರು ಭಾರತ ದಂಡ ಸಂಹಿತೆ(IPC Section) ಅಡಿ ಮಾನಹಾನಿ, ಬೆದರಿಕೆ, ಮಹಿಳೆಯರ ಗೌರವಕ್ಕೆ ಧಕ್ಕೆ ಅಡಿ FIR ದಾಖಲಿಸಿದ್ದಾರೆ.