ಮುಂದಿನ 15 ದಿನದೊಳಗೆ ಮಹತ್ವದ ರಾಜಕೀಯ ಬೆಳವಣಿಗೆ: ಸುಪ್ರಿಯ ಸುಲೆ

Supriya Sule & Ajith pawar
Published on

ಪುಣೆ: ಮುಂದಿನ 15 ದಿನಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮಹತ್ತರವಾದ ಬೆಳವಣಿಗೆಯಾಗಲಿದೆ ಎಂದು ಸಂಸದೆ ಸುಪ್ರಿಯಾ ಸುಲೆ ಭವಿಷ್ಯ ನುಡಿದಿದ್ಧಾರೆ. ‘

ಎನ್​ಸಿಪಿ ನಾಯಕ ಅಜಿತ್​ ಪವಾರ್ ಮತ್ತು ಅವರ ಬೆಂಬಲಿಗ ಶಾಸಕರು ಬಿಜೆಪಿ ಸೇರ್ಪಡೆ ಕುರಿತ ಪ್ರಶ್ನೆಗೆ ಅವರ ಪ್ರತಿಕ್ರಿಯೆ ಹೀಗಿದೆ.

ಮಹತ್ತರ ಬೆಳವಣಿಗೆ

ಇನ್ನು ಎನ್​ಸಿಪಿ ನಾಯಕ ಅಜಿತ್​ ಪವಾರ್​ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿ ಮುಂದಿನ 15 ದಿನಗಳಲ್ಲಿ ಮಹಾರಾಷ್ಟ್ರ ಹಾಗೂ ದೆಹಲಿ ರಾಜಕೀಯದಲ್ಲಿ ಮಹತ್ತರವಾದ ಬೆಳವಣಿಗೆಯಾಗಲಿದೆ ಎಂದು ಹೊಸ ಬಾಂಬ್​ ಒಂದನ್ನು ಸ್ಪೋಟಿಸಿದ್ಧಾರೆ.

SupriyA sule

ಎಲ್ಲದ್ದಕ್ಕೂ ನನ್ನ ಅಣ್ಣ(ಅಜಿತ್​ ಪವಾರ್​)ನನ್ನು ಏಕೆ ಹೊಣೆಗಾರನನ್ನಾಗಿ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಹೊಸ ಮುಖಬೆಲೆಯ ನಾಣ್ಯಕ್ಕೆ ಬೆಲೆ ಜಾಸ್ತಿ ಅದರ ಕುರಿತು ಎಲ್ಲರೂ ಹೆಚ್ಚಾಗಿ ಮಾತನಾಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ.

ಇನ್ನು ಎನ್​ಸಿಪಿಯ ಕೆಲ ಶಾಸಕರು ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗದೇ ಇರುವ ಕುರಿತು ಪ್ರತಿಕ್ರಿಯಿಸಿ ಎಲ್ಲಾರು ನಮ್ಮ ಸಂಪರ್ಕದಲ್ಲಿದ್ಧಾರೆ. ನಾನೂ ಎಲ್ಲಾ ಶಾಸಕರೊಂದಿಗೆ ಇನ್ನೊಮ್ಮೆ ಮಾತನಾಡುತ್ತೇನೆ ಎಂದು ಸಂಸದೆ ಸುಪ್ರಿಯಾ ಸುಲೆ ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net