ಆಫ್ರಿಕನ್ನರ ಪಾರ್ಟಿ ಮೇಲೆ ಪೊಲೀಸರ ದಾಳಿ; ಚೆಲ್ಲಾಪಿಲ್ಲಿಯಾಗಿ ಓಡಿದ ಮಂದಿ

African Party
Published on

ಬೆಂಗಳೂರು: ಹೊರಮಾವು ಬಳಿ ಆಫ್ರಿಕನ್​ ಪ್ರಜೆಗಳು ನಡೆಸುತ್ತಿದ್ದ ಕಿಚನ್​ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಓರ್ವನನ್ನು ಬಂಧಿಸಿದ್ದಾರೆ.

ಹೊರಮಾವು ಬಳಿ ಸುಮಾರು 300 ಜನರು ಪಾರ್ಟಿ ಮಾಡುತ್ತಿರುವ ಬಗ್ಗೆ ಸ್ಥಳೀಯರು ದಿಗ್ವಿಜಯ ನ್ಯೂಸ್​ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ದಿಗ್ವಿಜಯ ನ್ಯೂಸ್​ ಡಿಸಿಪಿ ಶರಣಪ್ಪ ಅವರಿಗೆ ವಿಷಯ ತಿಳಿಸಿತ್ತು.

ಸ್ಥಳಕ್ಕೆ ತೆರಳಿದ ಹೆಣ್ಣೂರು ಪೊಲೀಸರು ಪಾರ್ಟಿ ಮೇಲೆ ದಾಳಿ ಮಾಡಿದ್ದಾರೆ. ಪೊಲೀಸರನ್ನು ನೋಡುತ್ತಿದ್ದಂತೆ ಪಾರ್ಟಿಯಲ್ಲಿ ನೆರೆದಿದ್ದವರೆಲ್ಲ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಇವರೆಲ್ಲ ಮಧ್ಯಪಾನ ಮಾಡಿ ಸ್ಥಳೀಯರಿಗೆ ತೊಂದರೆ ಕೊಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net