ಬಾಂಬೆ ಯುವತಿ ಬಣ್ಣದ ಮಾತಿಗೆ ಮರುಳಾಗಿ ಹನಿಟ್ರ್ಯಾಪ್‌ಗೆ ಸಿಲುಕಿದ್ದ ಯುವಕ ಕೊಟ್ಟ ದೂರಿಗೆ ಮೂವರ ಸೆರೆಹಿಡಿದ ಖಾಕಿ ಪಡೆ

trap
Published on

ಬೆಂಗಳೂರು: ಟೆಲಿಗ್ರಾಮ್‌ನಲ್ಲಿ ಯುವಕರಿಗೆ ಮುಂಬೈ ಮೂಲದ ಯುವತಿ ಕಡೆಯಿಂದ ಬಲೆಬೀಸಿ ಹನಿಟ್ರ್ಯಾಪ್ ಎಸಗುತ್ತಿದ್ದ ಮೂವರು ಆರೋಪಿಗಳನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಮೂಲದ ಶರಣಪ್ರಕಾಶ್ ಬಳಿಗೇರ್, ಅಬ್ದುಲ್ ಖಾದರ್‌ಮತ್ತು ಜೆ.ಪಿ.ನಗರದ ಯಾಸಿನ್ ಬಂಧಿತರು. ಕೃತ್ಯದಲ್ಲಿ ಭಾಗವಹಿಸಿದ್ದ ಮುಂಬೈನ ಯುವತಿ ಮತ್ತು ವಾಸೀಂ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ದಕ್ಷಿಣ ವಿಭಾಗ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.

ವಾಸೀಂ ಮತ್ತು ಯುವತಿ ನಡುವೆ ಸ್ನೇಹವಿತ್ತು. ಉಳಿದ ಆರೋಪಿಗಳು ವಾಸೀಂಗೆ ಪರಿಚಯವಾಗಿ ಹನಿಟ್ರ್ಯಾಪ್ ಕೃತ್ಯ ಎಸಗಲು ಸಂಚುರೂಪಿಸಿದ್ದರು. ಬಾಂಬೆ ಯುವತಿ ಕಡೆಯಿಂದ ಟೆಲಿಗ್ರಾಮ್ ಗ್ರೂಪ್‌ನಲ್ಲಿ ಯುವಕರಿಗೆ ಬಲೆಬೀಸುತ್ತಿದ್ದರು. ಪರಿಚಯ ಆಗುವ ಯುವಕರ ಜತೆಗೆ ಸಲುಗೆಯಿಂದ ಚಾಟ್ ಮಾಡಿ ಮೊಬೈಲ್ ನಂಬರ್ ಬದಲಾಯಿಸಿಕೊಂಡು ಸಂಭಾಷಣೆ ಶುರು ಮಾಡುತ್ತಿದ್ದಳು. ಕೊನೆಗೆ ಖಾಸಗಿ ಕ್ಷಣಗಳನ್ನು ಕಳೆಯಲು ಯುವತಿ, ಆಹ್ವಾನ ಮಾಡುತ್ತಿದ್ದಳು.

ಇದೇ ರೀತಿ ಇತ್ತೀಚೆಗೆ ಯುವಕನನ್ನು ಬಲೆಗೆ ಬೀಳಿಸಿಕೊಂಡಿದ್ದ ಯುವತಿ, ಜೆ.ಪಿ.ನಗರದ 5ನೇ ಹಂತ ವಿನಾಯಕನಗರದ ಮನೆಗೆ ಕರೆಸಿಕೊಂಡಿದ್ದಳು. ಬೆಡ್‌ರೂಮ್‌ನಲ್ಲಿ ಅರೆನಗ್ನವಾಗಿ ಇದ್ದಾಗ ಮನೆ ಬಳಿಗೆ ಬಂದು ಕಾಲಿಂಗ್ ಬೆಲ್ ಒತ್ತಿದ್ದರು. ಒಳಗಿದ್ದ ಯುವತಿ ಬಾಗಿಲು ತೆರೆದು ತನ್ನ ಕಡೆಯವರನ್ನು ಒಳಗೆ ಬಿಟ್ಟುಕೊಳ್ಳುತ್ತಿದ್ದಳು. ಆರೋಪಿಗಳು, ಸಂತ್ರಸ್ತ ಯುವಕನ ಮೇಲೆ ಹಲ್ಲೆ ನಡೆಸಿ ಯುವತಿ ಜೊತೆಗೆ ಆತನನ್ನು ಅರೆನಗ್ನವಾಗಿ ನಿಲ್ಲಿಸಿ ಮೊಬೈಲ್‌ನಲ್ಲಿ ವಿಡಿಯೋ ತೆಗೆದುಕೊಂಡಿದ್ದರು. ಅಲ್ಲದೆ, ಸಂತ್ರಸ್ತನ ಬಳಿಯಿದ್ದ ಮೊಬೈಲ್ ಕಿತ್ತುಕೊಂಡು ಅದರಲ್ಲಿದ್ದ ೆನ್ ನಂಬರ್‌ಗಳನ್ನು ಕಾಫಿ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದರು.

ಅನ್ಯ ಧರ್ಮದ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದೀಯ. ಈ ವಿಡಿಯೋ ಮತ್ತು ೆಟೋಗಳನ್ನು ನಿಮ್ಮ ಕುಟುಂಬಸ್ಥರಿಗೆ ಕಳುಹಿಸಿ ಮರ್ಯಾದೆ ತೆಗೆಯುತ್ತಿವೆ. ಈಕೆಯ ಪತಿಗೆ ಹೇಳಿ ಅತ್ಯಾಚಾರ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಸಿದ್ದರು.

ಹೆದರಿದ ಯುವಕ, ತನ್ನ ವ್ಯಾಲೇಟ್‌ನಲ್ಲಿ ಇದ್ದ 50 ಸಾವಿರ ರೂ.ನ್ನು ಆರೋಪಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದ. ಮತ್ತಷ್ಟು ಹಣಕ್ಕೆ ಆರೋಪಿಗಳು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ನೊಂದ ಯುವಕ, ಕೊಟ್ಟ ದೂರಿನ ಮೇರೆಗೆ ಪುಟ್ಟೇನಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net