

ಬೆಂಗಳೂರು: ಬಾರ್ ಒಂದರಲ್ಲಿ ಎಣ್ಣೆ ಹೊಡಿಬೇಕು ಡಿಸ್ಟರ್ಬ್ ಮಾಡಬೇಡ ಎಂದಿದ್ದಕ್ಕೆ ಚಾಕುವಿಂದ ಚುಚ್ಚಿದ್ದ ಆರೋಪಿಯನ್ನು ಇಂದು ಬಂಧಿಸಲಾಗಿದೆ.
ಫೆ.16ರ ರಾತ್ರಿ ನೀಲಸಂದ್ರದ ಬಾರ್ ಒಂದರಲ್ಲಿ ಕಿರಣ್ ಹೆಸರಿನವ ಕುಡಿಯುತ್ತಾ ಕುಳಿತಿದ್ದ. ಅದೇ ಸಮಯಕ್ಕೆ ಬಾರ್ಗೆ ಬಂದ ಸೋಮು ಹೆಸರಿನ ವ್ಯಕ್ತಿ ಜೋರು ಜೋರಾಗಿ ಮಾತಾಡುತ್ತಾ ಬಾರಿನ ತುಂಬೆಲ್ಲಾ ಓಡಾಡಲಾರಂಭಿಸುತ್ತಾನೆ. ಇದರಿಂದ ತನಗೆ ಡಿಸ್ಟರ್ಬ್ ಆಗುತ್ತಿದೆ ಎಂದೆನಿಸಿದ ಕಿರಣ್, ಸೋಮುವಿನ ಬಳಿ "ಸೈಲೆಂಟಾಗ್ ಇರು, ಡಿಸ್ಟರ್ಬ್ ಮಾಡ್ಬೇಡ, ಬಾರ್ಗೆ ಬರೋದ್ ಎಣ್ಣೆ ಹೊಡ್ಯೋಕೆ ನಿನ್ ಸೌಂಡ್ ಕೇಳೊಕಲ್ಲ" ಎಂದು ಬೈದಿದ್ದಾನೆ. ಕಿರಣ್ ಹೇಳಿದ್ದನ್ನು ಕೇಳಿ ಸಿಟ್ಟಿಗೆದ್ದ ಸೋಮು ಚಾಕುವಿನಿಂದ ಕಿರಣ್ ಮೇಲೆ ಹಲ್ಲೆ ಮಾಡಿದ್ದ.
ಕಿರಣ್ನ ಹೊಟ್ಟೆಯ ಎರಡೂ ಪಕ್ಕೆಗಳಿಗೆ ಗಾಯಗಳಾಗಿದ್ದು ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅಶೋಕ್ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಂದು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ತಳ್ಳಿದ್ದಾರೆ.