'ಉತ್ತಮ ವಿಲನ್'​: ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ; ಸಾಕುತಂದೆಯ ಕುತ್ತಿಗೆಗೇ ಲಾಂಗ್ ಇಟ್ಟು ಬೆದರಿಸಿದ್ದ!

Uttam
Published on

ಬೆಂಗಳೂರು: ಇವನ ಹೆಸರಿನಲ್ಲೇ ಉತ್ತಮ ಇದೆ, ಆದರೆ ವರ್ತನೆಯಲ್ಲಿ ಈತ ವಿಲನ್. ಇವನು ಮಾಡಿದ್ದ ಕಿತಾಪತಿ ಒಂದೆರಡಲ್ಲ. ಈತ ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಮಾತ್ರವಲ್ಲ ಬಾಡಿಗೆ ಹಣ ತನಗೇ ಕೊಡಬೇಕು ಎಂದು ಸಾಕುತಂದೆಯ ಕುತ್ತಿಗೆಗೇ ಲಾಂಗ್ ಇಟ್ಟು ಹೆದರಿಸಿದ್ದ. ಹೀಗೆ ಮೇಲಿಂದ ಮೇಲೆ ಪುಂಡಾಟಿಕೆ ಮೆರಯುತ್ತಿದ್ದ ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತಮ್ ಕುಮಾರ್ ಬಂಧಿತ ಆರೋಪಿ. ಅಶ್ವತ್ಥನಗರದ ಮನೋಹರ್ ಪಾಂಡು ಲಮಾಣಿ ದಂಪತಿ ಈತನನ್ನು ಬಾಲ್ಯದಲ್ಲೇ ದತ್ತು ಪಡೆದು ಸಾಕಿದ್ದರು. ಆದರೆ ಅದ್ಯಾವುದನ್ನೂ ಲೆಕ್ಕಿಸದ ಈತ ಸಾಕುತಂದೆಯ ಕುತ್ತಿಗೆಗೆ ಲಾಂಗ್ ಇಟ್ಟು ಬಾಡಿಗೆ ಹಣವನ್ನೆಲ್ಲ ತನಗೇ ಕೊಡಬೇಕು ಎಂದು ಬೆದರಿಸಿದ್ದ.

ಮಂಜುನಾಥ್ ಹೆಸರಲ್ಲಿ ಐದಾರು ಬಾಡಿಗೆ ಮನೆಗಳಿದ್ದು, ಅವುಗಳ ಬಾಡಿಗೆ ಹಣ ತನಗೇ ಬರಬೇಕು ಎಂದು ಉತ್ತಮ್ ಪಟ್ಟು ಹಿಡಿದಿದ್ದ. ಇದೇ ವಿಚಾರವಾಗಿ ಜ. 31ರ ರಾತ್ರಿ 9.30ರ ಸುಮಾರಿಗೆ ಸಾಕುತಂದೆಗೆ ಬೆದರಿಸಿದ್ದ. ಅಲ್ಲದೆ, 2018ರಲ್ಲಿ ತಾಯಿಗೆ ಪೆಟ್ರೋಲ್ ಎರಚಿ ಬೆಂಕಿ ಕೂಡ ಹಚ್ಚಿದ್ದ. ಈ ವಿಚಾರವಾಗಿ ಜೈಲುಪಾಲಾಗಿ ಒಂದೂವರೆ ವರ್ಷದ ಹಿಂದೆ ಹೊರ ಬಂದಿದ್ದ ಈತ ಮತ್ತೆ ಪುಂಡಾಟಿಕೆ ಮುಂದುವರಿಸಿದ್ದ. ಸದ್ಯ ಸದಾಶಿವನಗರ ಠಾಣೆ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net