

ಬೆಂಗಳೂರು: ಯುವತಿ ಮೇಲೆ ಗ್ಯಾಂಗ್ ರೇಪ್ ಮಾಡಿದ್ದ ನಾಲ್ವರನ್ನು ಬೆಂಗಳೂರಿನ ಸಂಜಯನಗರದ ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ. ದೆಹಲಿ ಮೂಲದ ರಜತ್, ಶಿವ್ ರಾಣಾ, ದೇವ್ ಸರೋಯಿ, ಯೋಗೇಶ್ ಕುಮಾರ್ ಬಂಧಿತ ಆರೋಪಿಗಳು. ಇವರು ಮಾ. 24ರಂದು ಗ್ಯಾಂಗ್ ರೇಪ್ ಮಾಡಿದ್ದರು.
ಬೆಂಗಳೂರಿನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಯುವತಿ ಗ್ಯಾಂಗ್ರೇಪ್ ಸಂತ್ರಸ್ತೆ. ಈಕೆಯನ್ನು ಆರೋಪಿ ರಜತ್ ಮಾ. 24ರಂದು ರೆಸ್ಟೋರೆಂಟ್ಗೆ ಕರೆದುಕೊಂಡು ಹೋಗಿದ್ದ. ಬಳಿಕ ತಡರಾತ್ರಿ ಆದ ಕಾರಣ ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿರುವ ತನ್ನ ರೂಮ್ಗೆ ಕರೆದೊಯ್ದಿದ್ದ.
ರೂಮ್ಗೆ ಕರೆದೊಯ್ದ ಬಳಿಕ ಅಲ್ಲಿ ನಾಲ್ವರು ಯುವತಿಗೆ ಬೆದರಿಸಿ ಸರಣಿ ಅತ್ಯಾಚಾರ ನಡೆಸಿದ್ದು, ಈ ಕುರಿತು ಸಂತ್ರಸ್ತೆ ಸಂಜಯನಗರ ಪೊಲೀಸರಿಗೆ ದೂರು ನೀಡಿದ್ದಳು. ಆರೋಪಿಗಳು ರಾಷ್ಟ್ರಮಟ್ಟದ ಈಜುಪಟುಗಳಾಗಿದ್ದು, ಅಭ್ಯಾಸಕ್ಕೆಂದು ಬೆಂಗಳೂರಿಗೆ ಬಂದು ವಾಸವಿದ್ದರು.