ಸೀಮಾ ಹೈದರ್ ಆಯ್ತು, ಪ್ರಿಯಕರನನ್ನು ಹುಡುಕಿಕೊಂಡು ಏಳು ಸಮುದ್ರ ದಾಟಿ ಬಂದ ಮತ್ತೋರ್ವ ಮಹಿಳೆ!

polend
Published on

ಜಾರ್ಖಂಡ್: ಇತ್ತೀಚಿನ ದಿನಗಳಲ್ಲಿ ನಾಲ್ಕು ಮಕ್ಕಳ ತಾಯಿ ಸೀಮಾ ಹೈದರ್ ತನ್ನ ಪ್ರಿಯಕರನನ್ನು ಹುಡುಕಿಕೊಂಡು ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಕಥೆ ಸುದ್ದಿಯಲ್ಲಿದೆ. ಈ ಮಧ್ಯೆ, ಪೋಲೆಂಡ್‌ನ 45 ವರ್ಷದ ಮಹಿಳೆ ಬಾರ್ಬರಾ ಪೋಲಾಕ್ ಮತ್ತು ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ಕಟ್ಕಮ್‌ಸಂಡಿ ಬ್ಲಾಕ್‌ನ ಖುತ್ರಾ ಗ್ರಾಮದ 27 ವರ್ಷದ ಶಾದಾಬ್ ಮಲ್ಲಿಕ್ ಅವರ ಪ್ರೇಮಕಥೆ ಮುನ್ನೆಲೆಗೆ ಬಂದಿದೆ. ಬಾರ್ಬರಾ ತನ್ನ ಐದು ವರ್ಷದ ಮಗಳು ಅನಿಯಾ ಪೊಲಾಕ್‌ನೊಂದಿಗೆ ತನ್ನ ಗೆಳೆಯನನ್ನು ಭೇಟಿಯಾಗಲು ಪೋಲೆಂಡ್‌ನಿಂದ ಹಜಾರಿಬಾಗ್ ತಲುಪಿದ್ದಾಳೆ.

ಇನ್ಸ್ಟಾದಲ್ಲಿ ಪ್ರೀತಿ
ಬಾರ್ಬರಾ ಪೊಲಾಕ್ ಮತ್ತು ಶಾದಾಬ್ ಮಲ್ಲಿಕ್ ನಡುವೆ ಪ್ರೀತಿ 2021 ರಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆ ಇನ್ಸ್ಟಾಗ್ರಾಂ ಮೂಲಕ ಹುಟ್ಟಿತು. ಇನ್ಸ್ಟಾಗ್ರಾಂನಲ್ಲಿ ಸ್ನೇಹದ ನಂತರ, ಇಬ್ಬರ ನಡುವೆ ಸಂಭಾಷಣೆ ಪ್ರಾರಂಭವಾಯಿತು. ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತು. ಬಾರ್ಬರಾ ಜೂನ್ 26, 2023 ರಂದು ಭಾರತವನ್ನು ತಲುಪಿದರು. ನಂತರ ಮುಂಬೈ ಮೂಲಕ ಒಂದು ವಾರದ ಹಿಂದೆ ಹಜಾರಿಬಾಗ್ ತಲುಪಿದರು.

ಈ ಬಗ್ಗೆ ತನಿಖೆ ನಡೆಸಿದ ಡಿಎಸ್ಪಿ
ಹಜಾರಿಬಾಗ್ ತಲುಪಿದ ನಂತರ ಪೋಲಿಷ್ ಮಹಿಳೆ ಶಾದಾಬ್ ಗ್ರಾಮ ಖುತ್ರಾ ತಲುಪಿದಳು. ಎರಡು ದಿನಗಳ ಹಿಂದೆ ಖುತ್ರಾಗೆ ಪೋಲೆಂಡ್ ಮಹಿಳೆ ಬಂದಿರುವ ಬಗ್ಗೆ ಮಾಹಿತಿ ಪಡೆದ ಡಿಎಸ್ಪಿ ರಾಜೀವ್ ಕುಮಾರ್ ಮತ್ತು ಪೆಲಾವಲ್ ಒಪಿ ಉಸ್ತುವಾರಿ ಶಾದಾಬ್ ಮಲಿಕ್ ಖುತ್ರಾ ಮನೆಗೆ ಆಗಮಿಸಿ ತನಿಖೆ ನಡೆಸಿದರು. ಬಾರ್ಬರಾ 2028 ರವರೆಗೆ ಭಾರತ ವೀಸಾವನ್ನು ಹೊಂದಿದ್ದಾರೆ.

ಹೋಟೆಲ್‌ನಲ್ಲಿ ಉಳಿಯುವಂತೆ ಸೂಚಿಸಿದ ಪೊಲೀಸರು
ತನಿಖೆಯ ವೇಳೆ ಹಜಾರಿಬಾಗ್ ಪೊಲೀಸರು ಮಹಿಳೆಗೆ ನಗರದ ಹೋಟೆಲ್‌ನಲ್ಲಿ ತಂಗುವಂತೆ ಸೂಚಿಸಿದ್ದಾರೆ. ಆದರೆ ಮಹಿಳೆ ಮಾತ್ರ ಖುತ್ರಾ ಗ್ರಾಮದಲ್ಲಿಯೇ ಶಾದಾಬ್ ಮಲಿಕ್ ಮನೆಯಲ್ಲಿ ಮೊಕ್ಕಾಂ ಹೂಡಿದ್ದಾಳೆ. ಗ್ರಾಮದಲ್ಲಿ ಸಂಭ್ರಮವೋ ಎಂಬಂತೆ ಗ್ರಾಮದ ಮಹಿಳೆಯರು ಇವರನ್ನು ನೋಡಲು ಮುಗಿಬೀಳುತ್ತಿದ್ದಾರೆ.

ಪೋಲೆಂಡ್‌ಗೆ ಹೋಗಲು ಬಯಸಿದ ಮಹಿಳೆ
ಬಾರ್ಬರಾ ಪೊಲಾಕ್ ವಿವಾಹಿತ ಮಹಿಳೆ. ಒಂದು ಹೆಣ್ಣು ಮಗು ಇದೆ. ಪತಿಯಿಂದ ವಿಚ್ಛೇದನ ಪಡೆದಿದ್ದಾರೆ. ಅವಳು ಪೋಲೆಂಡ್‌ನಲ್ಲಿ ಕಂಪನಿಯನ್ನು ಹೊಂದಿದ್ದಾಳೆ. ಶೇಕಡ ಐವತ್ತರಷ್ಟು ಷೇರನ್ನೂ ಹೊಂದಿದ್ದಾಳೆ. ಮಹಿಳೆಯ ಪತಿ ನ್ಯೂಜಿಲೆಂಡ್‌ನಲ್ಲಿ ನೆಲೆಸಿದ್ದಾರೆ. ಶಾದಾಬ್ ಪ್ರಕಾರ, ಬಾರ್ಬರಾ ಅವರನ್ನು ಪೋಲೆಂಡ್‌ಗೆ ಕರೆದೊಯ್ಯಲು ಬಯಸುತ್ತಾರೆ. ಅಷ್ಟೇ ಅಲ್ಲ, ಆ ಮಹಿಳೆಯ ಮಗು ಶಾಬಾದ್ ಅನ್ನು ಡ್ಯಾಡಿ ಎಂದು ಕರೆಯುತ್ತದೆ. ಶಾದಾಬ್ ಅವಿವಾಹಿತ. ಅವರು ಮುಂಬೈನಲ್ಲಿ ಬಿಎ ಆನರ್ಸ್ ಓದಿದ್ದಾರೆ. ಅವರ ತಾಯಿಯ ಚಿಕ್ಕಪ್ಪನೊಂದಿಗೆ ವಾಸಿಸುತ್ತಿದ್ದಾರೆ ಮತ್ತು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಆತನ ತಂದೆ ತಾಯಿ ತೀರಿ ಹೋಗಿದ್ದಾರೆ. ಅವರು ಕರೋನಾ ಅವಧಿಯಿಂದಲೂ ಖುತ್ರಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಇಂಗ್ಲಿಷ್ ಅರ್ಥ ಮಾಡಿಕೊಳ್ಳುವ ಮತ್ತು ಮಾತನಾಡುವ ಕಾರಣ ಅವರ ಪ್ರೀತಿಗೆ ಭಾಷೆ ಅಡ್ಡಿಯಾಗಲಿಲ್ಲ.

ಭಾರತವು ಸುಂದರವಾದ ಸ್ಥಳ
ಬಾರ್ಬರಾ ಹೇಳುವಂತೆ ಭಾರತವು ಸುಂದರವಾದ ಸ್ಥಳವಾಗಿದೆ. ಆದರೆ ಹಳ್ಳಿಯ ಜನರು ನಮ್ಮನ್ನು ವಿಚಿತ್ರವಾಗಿ ನೋಡುತ್ತಿದ್ದಾರೆ. ಅದು ನಮಗೆ ಇಷ್ಟವಿಲ್ಲ. ಅಷ್ಟಕ್ಕೂ ನಾನು ಕೂಡ ಮನುಷ್ಯ ಎಂದು ಹೇಳುತ್ತಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net