ಹೈದರಾಬಾದ್​ನಲ್ಲಿದ್ದ ಹೆಂಡತಿ, ಮನೆಯವರ ಮೇಲೆ ವಿಷ ಪ್ರಯೋಗ: ಲಂಡನ್​ನಲ್ಲಿದ್ದುಕೊಂಡೇ ಮಾಸ್ಟರ್ ಪ್ಲಾನ್ ಮಾಡಿದ ಪತಿ..!

chilli
ಸಾಂದರ್ಭಿಕ ಚಿತ್ರ
Published on

ಹೈದರಾಬಾದ್‌: ಕೌಟುಂಬಿಕ ಕಲಹದಿಂದ ಪತ್ನಿಯ ಮೇಲೆ ಕೋಪಗೊಂಡ ವ್ಯಕ್ತಿಯೊಬ್ಬ ತನ್ನ ಪತ್ನಿ ಸೇರಿದಂತೆ ಮನೆಯವರನ್ನೆಲ್ಲ ಕೊಲ್ಲಲು ನಿರ್ಧರಿಸಿ ಲಂಡನ್​ನಲ್ಲಿದ್ದುಕೊಂಡೇ ಪತ್ನಿಯ ಮನೆಯವರ ಮೇಲೆ ವಿಷ ಪ್ರಯೋಗ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

ಇದನ್ನೂ ಓದಿ: ನೆರೆಮನೆಯಳ ಜತೆ ಮೂರು ಬಾರಿ ಯುವಕ ಪರಾರಿ: ಆತನ ತಂದೆ-ತಾಯಿಯ ಹತ್ಯೆಗೈದ ಯುವತಿ ಕುಟುಂಬ

ಮಿಯಾಪುರದ ಗೋಕುಲ್ ಫ್ಲಾಟ್‌ನಲ್ಲಿ ವಾಸವಾಗಿರುವ ಹಣಮಂತ ರಾವ್ ಮತ್ತು ಉಮಾಮಹೇಶ್ವರಿ ದಂಪತಿಯ ಪುತ್ರಿ ಶಿರಿಷಾ ಎಂಬಾಕೆ 2018ರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಅಜಿತ್ ಕುಮಾರ್​ನೊಂದಿಗೆ ವಿವಾಹವಾಗಿ ಉದ್ಯೋಗದ ಕಾರಣ ಲಂಡನ್​ನಲ್ಲಿ ನೆಲೆಸಿದ್ದು ಇವರಿಗೆ ಒಬ್ಬ ಮಗಳಿದ್ದಾಳೆ. ಆದರೆ ಸ್ವಲ್ಪ ಸಮಯದ ನಂತರ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಉಲ್ಬಣಗೊಂಡಿದ್ದು, ಅವಳು ಯುಕೆ ಪೊಲೀಸರಿಗೆ ದೂರು ನೀಡಿದ್ದಳು. ಅಂದಿನಿಂದ ದಂಪತಿಗಳಿಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಇತ್ತ ಅಜಿತ್ ಕುಮಾರ್ ತನ್ನ ಹೆಂಡತಿಯ ಮೇಲೆ ಕೋಪಗೊಂಡು ಹೆಂಡತಿ ಮತ್ತು ಅತ್ತೆಯನ್ನು ಕೊಲ್ಲಲು ಬಯಸಿದ್ದನು. ಅದಕ್ಕಾಗಿ ಲಂಡನ್​ನಲ್ಲಿ ತನ್ನೊಂದಿಗೆ ಕೆಲಸ ಮಾಡುತ್ತಿರುವ ವಿನೋದ್ ಕುಮಾರ್ ಎಂಬಾತನ ನೆರವು ಕೋರಿದ್ದ. ಅಲ್ಲದೇ ಹೈದರಾಬಾದ್‌ನಲ್ಲಿ ತನ್ನ ಮತ್ತು ಹೆಂಡತಿಯ ಸ್ನೇಹಿತರಾಗಿದ್ದ ಭವಾನಿ ಶಂಕರ್, ಅಶೋಕ್ ಮತ್ತು ಗೋಪಿನಾಥ್ ಜತೆಗೆ ಶಿರಿಷಾಳ ಸಂಬಂಧಿ ಪೂರ್ಣೇಂದ್ರ ರಾವ್ ಜತೆ ಸೇರಿ ಸಂಚು ರೂಪಿಸಿದ್ದನು.

ಇದನ್ನೂ ಓದಿ: ಬಾತ್​ರೂಮ್​ನಲ್ಲಿಯೇ ಮೂಕ-ಕಿವುಡ ಮಹಿಳೆಯ ಮೇಲೆ ದುಷ್ಕೃತ್ಯ ಎಸಗಿದ ಯುವಕ..

ಈ ನಡುವೆ ಶಿರಿಷಾಳ ಅಣ್ಣನ ಮದುವೆ ತಕ್ಷಣ ನಿಶ್ಚಯವಾಗಿದ್ದಕ್ಕೆ ಆಕೆ ಮಗಳನ್ನು ಕರೆದುಕೊಂಡು ಲಂಡನ್​ನಿಂದ ಹೈದರಾಬಾದ್​ಗೆ ತೆರಳಿದ್ದಳು. ಈ ವೇಳೆಗಾಗಲೇ ತನ್ನ ಅತ್ತೆಯ ಮನೆಯ ಮೇಲೆ ನಿಗಾ ಇರಿಸಲು ಕಾವಲುಗಾರನ ಮಗ ರಮೇಶನಿಗೆ ಅಜಿತ್​ ಹಣ ನೀಡಿದ್ದನು. ಮೊದಲಿಗೆ ಅವರು ವಿಷದ ಚುಚ್ಚುಮದ್ದನ್ನು ನೀಡಿ ಅವನನ್ನು ಕೊಲ್ಲಲು ಬಯಸಿದ್ದರು. ಆದರೆ ಅದು ವಿಫಲವಾಗಿತ್ತು. ಕೊನೆಗೆ ಡೆಲಿವರಿ ಬಾಯ್ ಮೂಲಕ ವಿಷಪೂರಿತ ಮಸಾಲೆ ಪುಡಿ, ಅರಿಶಿನ ಮತ್ತು ಮೆಣಸಿನಕಾಯಿಯ ಮಾದರಿ ಪ್ಯಾಕೆಟ್‌ಗಳನ್ನು ತಲುಪಿಸಿದ್ದು, ಇದನ್ನು ಬಳಸುತ್ತಿದ್ದ ಶಿರಿಷಾ ಕುಟುಂಬದ ಆರು ಮಂದಿ ತೀವ್ರ ಅಸ್ವಸ್ಥಗೊಂಡಿದ್ದರು. ಬಳಿಕ ಜುಲೈ 5ರಂದು ಶಿರಿಷಾ ತಾಯಿ ಉಮಾಮಹೇಶ್ವರಿ ಸಾವನ್ನಪ್ಪಿದ್ದರು.

ಮೊದಮೊದಲು ಆಕೆಯ ಸಾವಿಗೆ ಅನಾರೋಗ್ಯವೇ ಕಾರಣ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆ ಬಳಿಕ ಸಿರೀಶಾ, ಆಕೆಯ ತಂದೆ, ಕಿರಿಯ ಸಹೋದರ, ಮರದಾಳು ಹಾಗೂ ಮತ್ತೊಬ್ಬ ಮಹಿಳೆಯ ಸಂಬಂಧಿ ಕಾಲು ಮತ್ತು ಕೈ ಸ್ಪರ್ಶ ಕಳೆದುಕೊಂಡಿದ್ದು ಅನುಮಾನಗೊಂಡು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಅದರಲ್ಲಿ ವಿಷಕಾರಿ ಮಾದರಿಗಳು ಇರುವುದು ಪತ್ತೆಯಾಗಿದೆ. ಈ ಕುರಿತು ಶಿರಿಷಾ ಮಿಯಾಪುರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಅನುಮಾನಾಸ್ಪದವಾಗಿ ಕಾಣುತ್ತಿದ್ದ ವಾಚ್‌ಮನ್ ಮಗ ರಮೇಶ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಶಿರಿಷಾ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಪೂರ್ಣೇಂದರ್ ರಾವ್ ಹೆಸರು ಹೇಳಿದ್ದಾನೆ. ಪೂರ್ಣೇಂದರ್ ರಾವ್​ನನ್ನು ವಿಚಾರಣೆ ನಡೆಸಿದಾಗ ಮೂಲ ಸಂಚು ಬಯಲಾಗಿದೆ. ಸಂಚು ರೂಪಿಸಿದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಲಂಡನ್ ನಲ್ಲಿರುವ ಪ್ರಮುಖ ಆರೋಪಿ ಅಜಿತ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net