ಪೊಲೀಸರಿಗೆ ಹೆದರಿ ಓಡಿ, ಜೀವವನ್ನೇ ಕಳೆದುಕೊಂಡ ಯುವಕ...

Death 5 May 20
Published on

ಚಾಮರಾಜನಗರ: ತಾಲೂಕಿನ ಯಾಲಕ್ಕೂರು ಗ್ರಾಮದಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳದೆ ಗುಂಪಿನಲ್ಲಿದ್ದ ಯುವಕ ಪೊಲೀಸರನ್ನು ಕಂಡು ಭಯದಿಂದ ಓಡುತ್ತಿದ್ದಾಗ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ. ಗ್ರಾಮದ ಶಂಕರ್ (22) ಮೃತ.

ಭಾನುವಾರ ಜಾರಿಯಲ್ಲಿದ್ದ ಲಾಕ್​ಡೌನ್ ವೇಳೆ ಸಂಜೆ 6 ಗಂಟೆಯಲ್ಲಿ ಗ್ರಾಮದ ಅಂಗನವಾಡಿ ಬಳಿಯ ಜಗುಲಿ ಮೇಲೆ 15ಕ್ಕೂ ಹೆಚ್ಚು ಯುವಕರ ಗುಂಪು ಸೇರಿತ್ತು. ಕೋವಿಡ್ ಜಾಗೃತಿ ಮೂಡಿಸಲೆಂದು ಗ್ರಾಮಕ್ಕೆ ಬಂದ ಕುದೇರು ಠಾಣೆಯ ಪೊಲೀಸರ ವಾಹನ ಕಂಡ ಈ ಗುಂಪು ದಿಕ್ಕಾಪಾಲಾಗಿ ಓಡಿತು. ಈ ವೇಳೆ ಓಡುತ್ತಿದ್ದ ಶಂಕರ್ ಜಮೀನೊಂದರಲ್ಲಿ ಎಡವಿ ಬಿದ್ದು ಪ್ರಜ್ಞೆ ತಪ್ಪಿದ. ಗ್ರಾಮಸ್ಥರು ಆತನನ್ನು ಚಿಕಿತ್ಸೆಗಾಗಿ ಸಂತೇಮರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು.

ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು. ಜಿಲ್ಲಾಸ್ಪತ್ರೆಗೆ ಕರೆದೊಯ್ದ ಬಳಿಕ ಹೃದಯಾಘಾತದಿಂದ ಮೃತಪಟ್ಟಿರುವುದು ತಿಳಿದುಬಂದಿದೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net