

ರಾಣೆಬೆನ್ನೂರ: ಜನ ಸಂಸ್ಕೃತಿ ಪ್ರತಿಷ್ಠಾನ, ಆರ್ಟ್ ಫೌಂಡೇಶನ ಬೆಂಗಳೂರು, ಮಿಂಚುಳ್ಳಿ ಸಾಹಿತ್ಯ ಪತ್ರಿಕೆ ಸಹಯೋಗದೊಂದಿಗೆ ಆ. 7 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕನ್ನಡದ ಶ್ರೇಷ್ಠ ಚಿಂತಕ ಕಿ.ರಂ. ನಾಗರಾಜ ನೆನಪಿನ ಕಾಡುವ ಕಿರಂ ಅಹೋರಾತ್ರಿ ಕವಿಗೋಷ್ಠಿಗೆ ನಗರದ ತರಳಬಾಳು ಇಂಜಿನಿಯರ್ ಕಾಲೇಜ್‌ನ ಉಪನ್ಯಾಸಕ ಡಾ. ಎಂ.ಈ. ಶಿವಕುಮಾರ ಹೊನ್ನಾಳಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.