

ಮುಂಬೈ: ಇಂದು ಪ್ರಸಿದ್ಧ ವರ್ಣಚಿತ್ರಕಾರ ಮತ್ತು ಕವಿ ಇಮ್ರೋಜ್ ತಮ್ಮ 97ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ತೀವ್ರ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಶುಕ್ರವಾರ ಅವರ ಮುಂಬೈ ನಿವಾಸದಲ್ಲಿ ಕೊನೆಯುಸಿರೆಳೆದರು.
ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಕವಿ ಇಮ್ರೋಜ್ ಅವರನ್ನು ಕೆಲವು ದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ನಂತರ ಕುಟುಂಬಸ್ಥರು ಅವರನ್ನು ಮನೆಗೆ ಕರೆದುಕೊಂಡು ಬಂದಿದ್ದರು. ಆದ್ರೆ, ಇಂದು ತಮ್ಮ ನಿವಾಸಿದಲ್ಲಿ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಜನವರಿ 26, 1926 ರಂದು ಪಂಜಾಬ್‌ನ ಲಿಯಾಲ್‌ಪುರದಲ್ಲಿ ಜನಿಸಿದ ಇಮ್ರೋಜ್, 1950 ರಲ್ಲಿ ಅಮೃತಾ ಪ್ರೀತಮ್ ಎಂಬ ಖ್ಯಾತ ಕವಯಿತ್ರಿಯನ್ನು ಭೇಟಿಯಾಗಿ, ಉತ್ತಮ ಸಂಬಂಧ ಹೊಂದಿದ್ದರು. 2005 ರಲ್ಲಿ ಪ್ರೀತಮ್ ಅವರು ಸಾವನ್ನಪ್ಪಿದರು. ಬರೋಬ್ಬರಿ 40 ವರ್ಷಗಳ ಕಾಲ ಇಬ್ಬರು ಒಟ್ಟಿಗೆ ಜೀವನ ನಡೆಸಿದ್ದರು,(ಏಜೆನ್ಸೀಸ್).