

ನವದೆಹಲಿ: ದೇಶದೆಲ್ಲೆಡೆ ಕ್ರಾಂತಿ ಮಾಡುತ್ತಿರುವ ವಂದೇ ಭಾರತ್ ರೈಲು ಶೀಘ್ರ ಮರ್ಯಾದಾ ಪುರುಷೋತ್ತಮ ಶ್ರೀರಾಮ ಜನ್ಮಭೂಮಿ ಅಯೋಧ್ಯೆಗೂ ಬರಲಿದೆ. ಇದಕ್ಕೆ ಪೂರಕವಾಗಿ ದರ್ಭಾಂಗ್ -ಅಯೋಧ್ಯೆ ನಡುವೆ ವಂದೇ ಭಾರತ್ ರೈಲಿನ ಪ್ರಯೋಗಾರ್ಥ ಸಂಚಾರ ಡಿ.24 ರಂದು ನಡೆಯುತ್ತಿದೆ.
ಶ್ರೀರಾಮ ಮಂದಿರದ ಉದ್ಘಾಟನೆಗೆ ಮುನ್ನ ಸೀತಾಮಾತೆಯ ತಾಯಿಯ ಮನೆಯಿದ್ದ ಸ್ಥಳವೆಂದೇ ಪ್ರಸಿದ್ಧಿ ಪಡೆದಿರುವ ದರ್ಭಾಂಗ್ ನಿಂದ ಶ್ರೀರಾಮದೇವರ ವಾಸಸ್ಥಳ(ಅತ್ತೆ ಮನೆವರಿಗೆ) ರೈಲು ಓಡಲಿದೆ.
ದರ್ಭಾಂಗ್ -ಅಯೋಧ್ಯೆ ವಂದೇ ಭಾರತ್ ರೈಲಿನ ಟ್ರಯಲ್ 24ಕ್ಕೆ ನಡೆಸುತ್ತಿರುವುದಕ್ಕೆ ಕಾರಣವೂ ಇದೆ. ಜ.22ರಂದು ಶ್ರೀರಾಮ ಮಂದಿರದ ಉದ್ಘಾಟನೆ ಇದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಜ.22 ರಂದು ಅಯೋಧ್ಯೆಯಲ್ಲಿ ಉದ್ಘಾಟಿಸಲಿದ್ದಾರೆ. ಅದಕ್ಕೆ ಮುನ್ನ ಸೀತಾ ಮಾತೆಯ ತಾಯಿಯ ಮನೆಯಿಂದ ಅತ್ತೆಯ ಮನೆಗೆ ರೈಲು ಓಡಲಿರುವುದು ವಿಶೇಷ ಪಡೆದುಕೊಂಡಿದೆ.
ವಂದೇ ಭಾರತ್ ರೈಲು ಖರ್ಮಾಸ್(ಜನವರಿ 14)ರ ನಂತರ ಅಂದರೆ ರೈಲಿನ ನಿಯಮಿತ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಾಜಿಪುರ ರೈಲ್ವೇ ಜನರಲ್ ಮ್ಯಾನೇಜರ್ ಅನಿಲ್ ಕುಮಾರ್ ಖಂಡೇಲ್ವಾಲ್ ಅವರು ಡಿ.22 ರಂದು ಬೆಳಗ್ಗೆ 10.30ಕ್ಕೆ ಸೀತಾಮರ್ಹಿ ರೈಲು ನಿಲ್ದಾಣವನ್ನು ತಲುಪಿ ರೈಲು ಪ್ರಯೋಗದ ಮೊದಲು ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾರೆ. ಇದು ಸೀತಾಮಾತೆಯ ಜನ್ಮಸ್ಥಳ ಎಂಬುದು ಗಮನಾರ್ಹ ಸಂಗತಿಯಾಗಿದೆ. ಸೀತಾಮರ್ಹಿ ರೈಲ್ವೆ ನಿಲ್ದಾಣದ ಅಧೀಕ್ಷಕ ಸುರೇಂದ್ರ ಕುಮಾರ್ ಸಿಂಗ್ ಇದನ್ನು ಸ್ಪಷ್ಟಪಡಿಸಿದ್ದಾರೆ.
ದರ್ಭಾಂಗದಿಂದ ಕಮ್ತೌಲ್, ಜನಕ್‌ಪುರ ರಸ್ತೆ, ಸಿತಾಮರ್ಹಿ, ಬೈರಾಗನಿಯಾ, ಘೋಡಸಾಹನ್, ರಕ್ಸಾಲ್, ನರ್ಕಟಿಯಾಗಂಜ್, ಸಿಕ್ತಾ, ವಾಲ್ಮೀಕಿನಗರ, ಕಪ್ತಂಗಂಜ್ ಮೂಲಕ ಅಯೋಧ್ಯೆಗೆ ಪ್ರಯೋಗಾರ್ಥ ರೈಲು ಸಂಚರಿಸಲಿದೆ.
ಹಿರಿಯ ಅಧಿಕಾರಿಗಳು ಮತ್ತು ಭದ್ರತಾ ಅಧಿಕಾರಿಗಳು ಈ ಟ್ರಯಲ್ ರನ್ ರೈಲಿನಲ್ಲಿ ಸವಾರಿ ಮಾಡಲಿದ್ದಾರೆ. ಇದರೊಂದಿಗೆ ಮೂರು ವಲಯಗಳ ಜನರಲ್ ಮ್ಯಾನೇಜರ್‌ಗಳು, ಡಿಆರ್‌ಎಂಗಳು ಮತ್ತು ಹಿರಿಯ ಕಾರ್ಯಾಚರಣೆ ವ್ಯವಸ್ಥಾಪಕರು ರೈಲು ಮಾರ್ಗವದ ಮೇಲ್ವಿಚಾರಣೆ ಮಾಡುತ್ತಾರೆ.
ರೈಲಿನ ಗರಿಷ್ಠ ವೇಗ ಗಂಟೆಗೆ 110 ಕಿ.ಮೀ: ಈ ರೈಲು ಪುಶ್-ಪುಲ್ ತಂತ್ರಜ್ಞಾನದಿಂದ ತಯಾರಿಸಲಾಗಿದೆ. ರೈಲಿನ ಮುಂದೆ ಮತ್ತು ಹಿಂದೆ ಇಂಜಿನ್‌ಗಳಿರುತ್ತವೆ. ಮುಂಭಾಗದ ಎಂಜಿನ್ ರೈಲನ್ನು ಎಳೆಯುತ್ತದೆ ಮತ್ತು ಹಿಂಭಾಗದ್ದು ಅದನ್ನು ತಳ್ಳುತ್ತದೆ. ಇದರಿಂದಾಗಿ ರೈಲಿನ ವೇಗವು ಹೆಚ್ಚಾಗುತ್ತದೆ.