

ನವದೆಹಲಿ: ಕರೋನಾ ವೈರಸ್ Covid19 ಸೋಂಕು ತೀವ್ರವಾಗಿ ಹರಡುತ್ತಿದ್ದು, ಅದನ್ನು ತಡೆಯುವ ಸಲುವಾಗಿ ಎಲ್ಲರೂ ಮನೆಯಲ್ಲೇ ಇರಿ. ಹೊರಗೆ ಬರಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ ಮತ್ತೆ ಆಗ್ರಹಪೂರ್ವಕವಾಗಿ ದೇಶವಾಸಿಗಳನ್ನು ಒತ್ತಾಯಿಸಿದ್ದಾರೆ.
ಅವರು ಸೋಮವಾರ ಪ್ರಮುಖ ಟಿವಿ ಮಾಧ್ಯಮಗಳ ಉದ್ಯೋಗಿಗಳು, ಮಾಲೀಕರ ಜತೆಗೆ ವಿಡಿಯೋ ಸಂವಾದ ಮಾಡುತ್ತ ಈ ವಿಷಯವನ್ನು ಹೇಳಿದ್ದಾರೆ. Covid19ಗೆ ಸಂಬಂಧಿಸಿ ಹರಡುತ್ತಿರುವ ಸುಳ್ಳು ಸುದ್ದಿಯನ್ನು ತಡೆಯಲು ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವಿನಂತಿ ಮಾಡಿದ್ದೇನೆ. ಅದೇ ರೀತಿ, ಎಲ್ಲ ಮಾಧ್ಯಮದವರೂ ತಮ್ಮ ಉದ್ಯೋಗಿಗಳ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಬೇಕು. ಕಚೇರಿ ಅಥವಾ ಮನೆಯ ಒಳಗಿದ್ದರೂ ಪರಸ್ಪರ ಅಂತರ(#SocialDistancing)ವನ್ನು ಕಾಯ್ದುಕೊಳ್ಳಿ. ಮಾಧ್ಯಮಗಳೂ ಈಗಾಗಲೇ ತಮ್ಮ ಉದ್ಯೋಗಿಗಳಿಗೆ #WorkFromHome ಸೌಕರ್ಯವನ್ನು ಮಾಡಿಕೊಟ್ಟಿವೆ.
ಕಚೇರಿ ಅಥವಾ ಮನೆಯ ಒಳಗಿದ್ದರೂ ಪರಸ್ಪರ ಅಂತರ(#SocialDistancing)ವನ್ನು ಕಾಯ್ದುಕೊಳ್ಳಬೇಕಾದ ಅಗತ್ಯವನ್ನು ಮಾಧ್ಯಮಗಳು ಮತ್ತೆ ಮತ್ತೆ ಸಾರ್ವಜನಿಕರಿಗೆ ತಿಳಿಸುತ್ತಿರಬೇಕು. ಅದೇ ರೀತಿ ಮನೆಯಲ್ಲೇ ಇರಿ #StayHome ಬಗ್ಗೆಯೂ ಎಚ್ಚರಿಸುತ್ತಿರಬೇಕು ಎಂದು ಪ್ರಧಾನಿ ಮೋದಿ ಆಗ್ರಹಿಸಿದ್ದಾರೆ. (ಏಜೆನ್ಸೀಸ್)