

ನವದೆಹಲಿ: ಅಮೆರಿಕ - ಭಾರತ ವ್ಯವಹಾರ ಸಮಿತಿ ವತಿಯಿಂದ ಜು.22ರಂದು ನಡೆಯಲಿರುವ ಇಂಡಿಯಾ ಐಡಿಯಾಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.
ಸಮಿತಿಯ 45ನೇ ವರ್ಷಾಚರಣೆಯ ಪ್ರಯುಕ್ತ ಈ ಕಾರ್ಯಕ್ರಮವನ್ನು ವರ್ಚುಯಲ್ ಮೂಲಕ ಹಮ್ಮಿಕೊಳ್ಳಲಾಗಿದೆ. ಉತ್ತಮ ಭವಿಷ್ಯದ ನಿರ್ಮಾಣ ಎನ್ನುವ ಥೀಮ್ೊಂದಿಗೆ ಶೃಂಗಸಭೆ ನಡೆಯಲಿದ್ದು ಆ ಕುರಿತು ಸಾಕಷ್ಟು ಚರ್ಚೆ ನಡೆಯಲಿದೆ.
ಮೋದಿ ಜತೆ ವಿದೇಶಾಂಗ ಸಚಿವ ಎಸ್.ಜೈಶಂಕರ್, ಅಮೆರಿಕ ಕಾರ್ಯದರ್ಶಿ ಮೈಕ್ ಪಾಂಪಿಯೊ ಸೇರಿದಂತೆ ಅನೇಕರು ಭಾಷಣ ಮಾಡಲಿದ್ದಾರೆ.