

ನವದೆಹಲಿ: ಗುಂಡಿನ ದಾಳಿಯಿಂದ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಈ ಹಿಂದೆ ಟೋಕಿಯೋದಲ್ಲಿ ಶಿಂಜೋ ಅಬೆ ಭೇಟಿಯಾಗಿದ್ದ ಸಂದರ್ಭದ ಫೋಟೋ ಶೇರ್ ಮಾಡುವ ಮೂಲಕ ತಮ್ಮ ಪ್ರಧಾನಿ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಅವರ ಸ್ನೇಹಿತರಾಗಿ ಶಿಂಜೋ ತಮ್ಮ ಅಧಿಕಾರವಧಿಯಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಶಿಂಜೋ ಅಬೆ ಹಾಗೂ ಪ್ರಧಾನಿ ಮೋದಿ ಅವರ ಭೇಟಿ ಐತಿಹಾಸಿಕ ಕ್ಷಣವಾಗಿದೆ. ಅಲ್ಲದೇ ಇತ್ತೀಚೆಗೆ ಕೊನೆಯ ಬಾರಿ ಶಿಂಜೋ ಅವರ ಭೇಟಿಯಾಗಿದ್ದ ಫೋಟೋವನ್ನು ಪ್ರಧಾನಿ ಮೋದಿ ಅವರು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡುವ ಮೂಲಕ ಅಬೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಶಿಂಜೋ ಅಬೆ ಅವರ ಅಧಿಕಾರವಧಿಯಲ್ಲಿ ಭಾರತ ಹಾಗೂ ಜಪಾನ್ ನಡುವೆ ಮತ್ತಷ್ಟು ಸ್ನೇಹ ಬಲವಾಗಿದ್ದು, ಉಭಯ ರಾಷ್ಟ್ರಗಳ ನಡುವಿನ ಉತ್ತಮ ಬಾಂಧವ್ಯ ಹೊಂದಿದ್ದ ಅಬೆ ಅವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮ ವಿಭೂಷಣ (2021) ಹಾಗೂ ನೇತಾಜಿ ಪ್ರಶಸ್ತಿ (2022)ನೀಡಿ ಗೌರವಿಸಲಾಗಿದೆ. (ಏಜೆನ್ಸೀಸ್)