ಕನ್ಯಾಕುಮಾರಿಗೆ ಪ್ರಧಾನಿ ಮೋದಿ ಪ್ರವಾಸ; ಸ್ವಾಮಿ ವಿವೇಕಾನಂದ ಸ್ಮಾರಕದಲ್ಲಿ ಧ್ಯಾನಕ್ಕೆ ಕುಳಿತ 'ನಮೋ'

WhatsApp Image 2024-05-31 at 11.50.15 AM
Published on

ತಮಿಳುನಾಡು: ಮೂರು ದಿನದ ಧ್ಯಾನ ವಿರಾಮ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡಿನ ಕನ್ಯಾಕುಮಾರಿಗೆ ಭೇಟಿ ನೀಡಿ, ಅಲ್ಲಿನ ಸ್ವಾಮಿ ವಿವೇಕಾನಂದ ಸ್ಮಾರಕದಲ್ಲಿ ಧ್ಯಾನಕ್ಕೆ ಕುಳಿತಿರುವ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣವನ್ನು ಸುತ್ತುವರೆದಿವೆ.

ಸ್ವಾಮಿ ವಿವೇಕಾನಂದ ಕಲ್ಲು ಸ್ಮಾರಕದಲ್ಲಿ ಧ್ಯಾನಕ್ಕೆ ಕುಳಿತಿರುವ ಪ್ರಧಾನಿಗಳು, ಮೇ.30ರಿಂದ ಜೂನ್​ 01ರವರೆಗೆ ಇಲ್ಲಿಯೇ ಧ್ಯಾನ ಮಾಡಲಿದ್ದಾರೆ ಎಂದು ವರದಿಯಾಗಿದೆ. ಈ ಸ್ಥಳದ ವಿಶೇಷತೆ ಏನಂದರೆ, ಅಂದು ಇದೇ ಜಾಗದಲ್ಲಿ ಸ್ವಾಮಿ ವಿವೇಕಾನಂದರು ಕೂಡ ಧ್ಯಾನ ಮಾಡಿದ್ದರು ಎಂಬ ಮಾತಿದೆ.

ಮೆಮೋರಿಯಲ್​ಗೆ ಬರುವ ಮುನ್ನ ಮೊದಲು ಭಾಗವತಿ ಅಮ್ಮನ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿಗಳು, ನಂತರದಲ್ಲಿ ಕಲ್ಲು ಸ್ಮಾರಕದ ಬಳಿ ಧ್ಯಾನದಲ್ಲಿ ಮಗ್ನರಾಗಿದ್ದಾರೆ. ಈ ಕುರಿತಾದ ಫೋಟೋ ಮತ್ತು ವಿಡಿಯೋಗಳನ್ನು ಬಿಜೆಪಿ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net