ಒಳನುಸುಳುಕೋರರ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ: ಶೇಖ್ ಹಸೀನಾ ಉಲ್ಲೇಖಿಸಿ ಅಸಾದುದ್ದೀನ್ ಓವೈಸಿ ಕೌಂಟರ್| Asaduddin Owaisi

Untitled design (100)
Published on

Asaduddin Owaisi: ಬಿಹಾರದಲ್ಲಿ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದ್ದು, ರಾಜಕೀಯ ಆರೋಪ, ಪ್ರತ್ಯಾರೋಪಗಳು ಮುಂದುವರೆದಿವೆ. ಒಳನುಸುಳುಕೋರರ ಬಗ್ಗೆ ಪ್ರಧಾನಿ ಮೋದಿ ಹೇಳಿಕೆಗೆ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಉಲ್ಲೇಖಿಸಿ ಶುಕ್ರವಾರ(ಸೆ. 26) ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ.

ಬಿಹಾರದಲ್ಲಿ ಚುನಾವಣಾ ಆಯೋಗದ SIR (ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ) ಪ್ರಕ್ರಿಯೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದಕ್ಕೆ, ಕೆಲವೇ ದಿನಗಳ ಹಿಂದೆ ಪ್ರಧಾನಿ ಮೋದಿ ಬಿಹಾರದಲ್ಲಿ ವಿರೋಧ ಪಕ್ಷಗಳು ಅಕ್ರಮ ಒಳನುಸುಳುಕೋರರನ್ನು, ಬಾಂಗ್ಲಾದೇಶಿಯರನ್ನು ಪ್ರೋತ್ಸಾಹಿಸುತ್ತಿವೆ ಎಂದು ಆರೋಪಿಸಿದ್ದರು.

ಈ ಕುರಿತು ಬಿಹಾರದ ಸೀಮಾಂಚಲ್​ ಪ್ರದೇಶದಲ್ಲಿ ಮಾತನಾಡಿರುವ ಓವೈಸಿ, ಪ್ರಧಾನಿ ಮೋದಿಯವರು ಬಿಹಾರದಲ್ಲಿ ಬಾಂಗ್ಲಾದೇಶೀಯರಿದ್ದಾರೆ ಎಂದು ಹೇಳುತ್ತಾರೆ. ಬಿಹಾರದಲ್ಲಿ ಬಾಂಗ್ಲಾದೇಶೀಯರಿಲ್ಲ. ಆದರೆ ದೆಹಲಿಯಲ್ಲಿ ನಿಮ್ಮ ಬಾಂಗ್ಲಾ ದೇಶದ ಸಹೋದರಿ ಇದ್ದಾರೆ. ಅವರನ್ನು ಬಾಂಗ್ಲಾದೇಶಕ್ಕೆ ಕಳುಹಿಸಿ. ಇಲ್ಲ ಅವರನ್ನು ಸೀಮಾಂಚಲ್‌ಗೆ ಕರೆತನ್ನಿ, ನಾವು ಅವರನ್ನು ಬಾಂಗ್ಲಾದೇಶಕ್ಕೆ ಕಳುಹಿಸುತ್ತೇವೆ ಎಂದು ಪರೋಕ್ಷವಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ ಕುರಿತು ವ್ಯಂಗ್ಯವಾಡಿದ್ದಾರೆ.

ಬಾಂಗ್ಲಾದೇಶದ ಪ್ರಧಾನಿ ಸ್ಥಾನದಿಂದ ಪದಚ್ಯುತಗೊಂಡ ಬಳಿಕ ಶೇಖ್ ಹಸೀನಾ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. 2019 ಆಗಸ್ಟ್ 5ರಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಡಾಕದಿಂದ ಭಾರತಕ್ಕೆ ಆಗಮಿಸಿದ್ದರು. (ಎಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net