ಪ್ರಧಾನಿ ಮೋದಿ ತಮ್ಮ ಅವಧಿಯನ್ನು ಮುಗಿಸುವುದಿಲ್ಲ, 2026ಕ್ಕೆ ಎನ್​ಡಿಎ ಸರ್ಕಾರ ಪತನ: Sanjay Raut

Sanjay Raut
Published on

ಮುಂಬೈ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರವು 2026ರವರೆಗೆ ಉಳಿಯುವುದು ಡೌಟ್​ ಎಂದು ಶಿವಸೇನೆ (UBT) ನಾಯಕ ಸಂಜಯ್​ ರಾವುತ್​ (Sanjay Raut) ಹೇಳಿದ್ದಾರೆ.

ಗುರುವಾರ (ಜನವರಿ 02) ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವುತ್ (Sanjay Raut), 2026ರವರೆಗೆ ಕೇಂದ್ರದಲ್ಲಿ ಎನ್​ಡಿಎ ಸರ್ಕಾರ ಅಧಿಕಾರ ನಡೆಸುವುದು ನನಗೆ ಅನುಮಾನವಾಗಿದೆ. ಒಂದು ವೇಳೆ ಸರ್ಕಾರ ಏನಾದರು ಪತನವಾದರೆ ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳ ರಾಜಕೀಯದಲ್ಲಿ ಭಾರೀ ಬೆಳವಣಿಗೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

Sanjay Raut

ಇನ್ನೂ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ಪ್ರತಿಕ್ರಿಯಿಸಿದ ಸಂಜಯ್​ ರಾವುತ್​ ನಮ್ಮ ನಾಯಕರು ಅವರೊಂದಿಗೆ ಮಾತನಾಡಿದ್ದು, ಸ್ಥಳೀಯ ಸಮಸ್ಯೆಗಳ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅಷ್ಟೇ. ಹೀಗಾಗಿ ಪಕ್ಷ ತೊರೆಯುವ ಮಾತು ಉದ್ಭವಿಸಲ್ಲ ಎಂದು ಸಂಜಯ್​​ ರಾವುತ್ ಸ್ಪಷ್ಟಪಡಿಸಿದ್ದಾರೆ.

288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್​ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು 235 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು 49 ಸ್ಥಾನಗಳಲ್ಲಿ ಜಯಗಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net