VIDEO| ಜಿ-20 ಶೃಂಗಸಭೆಯ ವೇದಿಕೆಗೆ ವಿಶ್ವ ನಾಯಕರ ಎಂಟ್ರಿ ಹೇಗಿದೆ ನೋಡಿ….

PM Modi G 20
Published on

ನವದೆಹಲಿ: ಬಹುನಿರೀಕ್ಷಿತ ಜಿ-20 ನಾಯಕರ ಶೃಂಗಸಭೆ ಇಂದಿನಿಂದ (ಸೆ.09) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆರಂಭವಾಗಿದ್ದು, ಎರಡು ದಿನಗಳ ಕಾಲ ನಡೆಯಲಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿದ್ದು, ಭಾರತದ ಪಾಲಿಗೆ ಪ್ರತಿಷ್ಠಿತ ಕಾರ್ಯಕ್ರಮವಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್​, ಬ್ರಿಟನ್​ ಪ್ರಧಾನಿ ರಿಷಿ ಸುನಕ್​, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸಿನಾ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಜಪಾನ್, ಜರ್ಮನಿ, ಇಟಲಿ, ಕೊಮೊರೊಸ್, ಟರ್ಕಿ, ಯುಎಇ, ದಕ್ಷಿಣ ಕೊರಿಯಾ, ಐರೋಪ್ಯ ಒಕ್ಕೂಟ, ಬ್ರೆಜಿಲ್ ಮತ್ತು ನೈಜೀರಿಯಾ ಸೇರಿದಂತೆ ವಿಶ್ವದ ನಾಯಕರು ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು, ವೇದಿಕೆಗೆ ವಿಶ್ವ ನಾಯಕರ ಎಂಟ್ರಿಯ ವಿಡಿಯೋ ಝಲಕ್​ ಇಲ್ಲಿದೆ ನೋಡಿ.

ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ದೆಹಲಿಯ ಪ್ರಗತಿ ಮೈದಾನದ ಜಿ 20 ಶೃಂಗಸಭೆಯ ಸ್ಥಳ ಭಾರತ ಮಂಟಪವನ್ನು ತಲುಪಿದ ಕ್ಷಣ.

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ದೆಹಲಿಯ ಪ್ರಗತಿ ಮೈದಾನದಲ್ಲಿ ಜಿ 20 ಶೃಂಗಸಭೆಯ ಸ್ಥಳವಾದ ಭಾರತ ಮಂಟಪಕ್ಕೆ ಆಗಮಿಸಿದ ಕ್ಷಣ.

ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌತ್ ಅವರು ದೆಹಲಿಯ ಪ್ರಗತಿ ಮೈದಾನದಲ್ಲಿ ಜಿ 20 ಶೃಂಗಸಭೆಯ ಸ್ಥಳವಾದ ಭಾರತ ಮಂಟಪಕ್ಕೆ ಆಗಮಿಸಿದರು.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಟೆಡ್ರೊಸ್ ಅಧಾನೋಮ್ ಆಗಮನದ ಕ್ಷಣ.

ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಜಿ20 ವೇದಿಕೆಗೆ ಆಗಮಿಸಿದ ಕ್ಷಣ.

ನೆದರ್​ಲ್ಯಾಂಡ್​ ಪ್ರಧಾನಿ ಮಾರ್ಕ್ ರುಟ್ಟೆ ಮತ್ತು ನೈಜೀರಿಯಾದ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರು ದೆಹಲಿಯ ಪ್ರಗತಿ ಮೈದಾನದಲ್ಲಿ ಜಿ 20 ಶೃಂಗಸಭೆಯ ಸ್ಥಳ ಭಾರತ್ ಮಂಟಪಕ್ಕೆ ಬಂದ ಕ್ಷಣ.

ಸಿಂಗಾಪುರದ ಪ್ರಧಾನಿ ಲೀ ಸೀನ್ ಲೂಂಗ್ ಮತ್ತು ಸ್ಪೇನ್‌ನ ಉಪಾಧ್ಯಕ್ಷ ನಾಡಿಯಾ ಕ್ಯಾಲ್ವಿನೋ ಆಗಮನ.

ಯುನೈಟೆಡ್ ಕಿಂಗ್‌ಡಮ್​ ಪ್ರಧಾನಿ ರಿಷಿ ಸುನಕ್ ಭಾರತ್ ಮಂಟಪಕ್ಕೆ ಆಗಮಿಸಿದ ಕ್ಷಣ.

ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಆಗಮನ.

ದೆಹಲಿಯ ಪ್ರಗತಿ ಮೈದಾನದಲ್ಲಿ ಜಿ 20 ಶೃಂಗಸಭೆಯ ಸ್ಥಳ ಭಾರತ ಮಂಟಪಕ್ಕೆ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಆಗಮನದ ದೃಶ್ಯ.

ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ದೆಹಲಿಯ ಪ್ರಗತಿ ಮೈದಾನದ ಜಿ 20 ಶೃಂಗಸಭೆಯ ಸ್ಥಳ ಭಾರತ್ ಮಂಟಪಕ್ಕೆ ಬಂದ ಕ್ಷಣ.

ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಎಂಟ್ರಿ ದೃಶ್ಯ.

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಆಗಮನ ಕ್ಷಣ.

ವಿಶ್ವದ 20 ಪ್ರಮುಖ ಆರ್ಥಿಕತೆಯ ನಾಯಕರು ಇಂದು ಮತ್ತು ನಾಳೆ ಒಟ್ಟುಗೂಡಲಿದ್ದಾರೆ. ಈ ಸಭೆ ಇಂಟರ್ನ್ಯಾಷನಲ್ ಎಕ್ಸಿಬಿಷನ್ ಕನ್ವೆನ್ಷನ್ ಸೆಂಟರ್‌ನ ಭಾರತ ಮಂಟಪಂನಲ್ಲಿ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಹವಾಮಾನ ಬದಲಾವಣೆ, ಸಾಲ, ಆಹಾರ ಭದ್ರತೆ, ಸುಸ್ಥಿರತೆ ಮತ್ತು ಭೌಗೋಳಿಕ ರಾಜಕೀಯ ಸಂಘರ್ಷದ ಬಗ್ಗೆ ಚರ್ಚೆಗಳಾಗಲಿದೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಥೀಮ್​ನೊಂದಿಗೆ ಭಾರತ ಶೃಂಗಸಭೆಯನ್ನು ಆಯೋಜಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net