

ನವದೆಹಲಿ: ಇಂದು ವಿಶ್ವ ಸಂಸ್ಕೃತ ದಿನ. ಭಾರತೀಯ ಜ್ಞಾನ ಪರಂಪರೆಯ ಮೂಲ ಗ್ರಂಥಗಳೆಲ್ಲವನ್ನೂ ಹೊತ್ತಿರುವ ಶ್ರೀಮಂತ ಸಂಸ್ಕೃತ ಭಾಷೆಯ ಮಹತ್ವವನ್ನು ಹೆಮ್ಮೆಯಿಂದ ಪ್ರಕಟಿಸುವುದಕ್ಕೆ ಇದು ಸೂಕ್ತ ಸಮಯ. ಈ ಸಂದರ್ಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಂಸ್ಕೃತ ಭಾಷೆಯಲ್ಲೇ ಟ್ವೀಟ್ ಮಾಡಿ ಶುಭಾಶಯ ಕೋರಿರುವುದು ವಿಶೇಷ.
"ಈ ಭಾಷೆ ಪ್ರಾಚೀನವಾದುದಾದರೂ, ಆಧುನಿಕವಾಗಿದೆ. ಇದರಲ್ಲಿ ಗಹನವಾದ ತತ್ವಜ್ಞಾನವಿದೆ, ತಾರೂಣ್ಯಪೂರ್ಣ ಕಾವ್ಯವೂ ಇದೆ. ಯಾವುದು ಸರಳತೆಯಿಂದ ಅಭ್ಯಾಸ ಮಾಡಲು ಯೋಗ್ಯವಾಗಿದ್ದರೂ ಶ್ರೇಷ್ಠ ದರ್ಶನಗಳನ್ನು ಹೊಂದಿದೆಯೋ, ಆ ಸಂಸ್ಕೃತ ಭಾಷೆಯನ್ನು ಹೆಚ್ಚು ಹೆಚ್ಚು ಜನರು ಓದಬೇಕು. ಎಲ್ಲರಿಗೂ ಸಂಸ್ಕೃತ ದಿವಸದ ಶುಭಾಶಯಗಳು" ಎಂದು ಮೋದಿ ಅವರು ಸಂಸ್ಕೃತ ಭಾಷೆಯಲ್ಲಿ ಬರೆದಿದ್ದಾರೆ.
ಮೋದಿ ಅವರ ಈ ಟ್ವೀಟ್ ಸಾವಿರಾರು ಬಾರಿ ರೀಟ್ವೀಟ್ ಆಗಿದ್ದು, ಸಹಸ್ರಾರು ಲೈಕ್ಗಳನ್ನು ಪಡೆಯುತ್ತಿದೆ.