VIDEO| ಚಿನ್ನವನ್ನು ಹೇಗೆ ಮುಚ್ಚಿಟ್ಟುಕೊಂಡು ತಂದಿದ್ದಾರೆ... ಇಲ್ಲಿ ನೋಡಿ!

gold
Published on

ಬೆಂಗಳೂರು: ಕೆಲವು ದೇಶಗಳಲ್ಲಿ ಅಗ್ಗವಾಗಿರುವ ಚಿನ್ನವನ್ನು ಭಾರತಕ್ಕೆ ಕಳ್ಳಸಾಗಣೆ ಮಾಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಈ ನಿಟ್ಟಿನಲ್ಲಿ ದುಷ್ಕರ್ಮಿಗಳು ಹೊಸ ಹೊಸ ಮಾರ್ಗಗಳನ್ನು ಹುಡುಕಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ, 'ನೀ ಹಾಸಿಗೆ ಕೆಳಗೆ ನುಸುಳಿದರೆ ನಾ ರಂಗೋಲಿ ಕೆಳಗೆ ನುಸುಳ್ತೀನಿ' ಎಂಬಂತೆ, ಕಾನೂನು ಮುರಿಯುವವರ ಈ ಪ್ರಯತ್ನಗಳನ್ನು ಪತ್ತೆ ಹಚ್ಚುವಲ್ಲಿ ಕಸ್ಟಮ್ಸ್​ ಅಧಿಕಾರಿಗಳು ಪರಿಣತಿ ಹೊಂದಿದ್ದಾರೆ.

ಇತ್ತೀಚೆಗೆ ಮಂಗಳೂರು ಕಸ್ಟಮ್ಸ್​ ಅಧಿಕಾರಿಗಳು ಇಂಥದ್ದೇ ಒಂದು ಕಳ್ಳಸಾಗಣೆಯ ಪ್ರಕರಣವನ್ನು ಭೇದಿಸಿದ್ದಾರೆ. ಹೆಣ್ಣುಮಕ್ಕಳ ಸುಂದರ ಹೇರ್​ಬ್ಯಾಂಡ್​​ಗಳಲ್ಲಿ ಚಿನ್ನದ ತಂತಿಗಳನ್ನು ಅಡಗಿಸಿಕೊಂಡು ತಂದಿದ್ದ ಪ್ರಯಾಣಿಕರನ್ನು ಬಂಧಿಸಿದ್ದಾರೆ. ಮಂಗಳೂರಿನ ಅಧಿಕಾರಿಗಳ ಈ ಚಾಕಚಕ್ಯತೆಯನ್ನು ಬೆಂಗಳೂರು ಕಸ್ಟಮ್ಸ್​ ಇಲಾಖೆ ಶ್ಲಾಘಿಸಿದ್ದು, ಈ ಬಗೆಗಿನ ವಿಡಿಯೋ ತುಣಕನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net