

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಕೇಳಲು ದೇಶದ ಜನತೆ ಅವರ ಅಧಿಕೃತ ಎಕ್ಸ್( ಈ ಹಿಂದಿನ ಟ್ವಿಟರ್) ಖಾತೆ ಸೇರಿದಂತೆ ಇತರೆ ಸಾಮಾಜಿಕ ಮಾಧ್ಯಮಗಳನ್ನು ಅನುಸರಿಸುತ್ತಾರೆ. ಈ ಹಿಂದಿನಿಂದಲೂ ಪ್ರಧಾನಿಗಳ ಭಾಷಣಗಳನ್ನು ಹಿಂದಿ ಭಾಷೆಯಲ್ಲೇ ಕೇಳಬೇಕಿತ್ತು. ಆದರೆ ಇದೀಗ ಮುಂದುವರೆದಿರುವ ಟೆಕ್ನಾಲಜಿಯ ಸಹಾಯದಿಂದ ದೇಶದ ಹಲವಾರು ಭಾಷೆಗಳಲ್ಲಿಯೇ ಪಿಎಂ ಅವರ ಮಾತುಗಳನ್ನು ಆಲಿಸಬಹುದಾಗಿದೆ. ಅದು ಎಐ ಶಕ್ತಿಯಿಂದ.
ಈ ಕುರಿತು ಸ್ವತಃ ಪ್ರಧಾನಿ ಅವರ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. "ಕೆಲವರು ನನ್ನ ಭಾಷಣಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರಿಸಲು ಎಐ ಶಕ್ತಿಯನ್ನು ಬಳಸಿದ್ದಾರೆ. ಕನ್ನಡದಲ್ಲಿ ನನ್ನ ಭಾಷಣದ ಒಂದು ಭಾಗ ಇಲ್ಲಿದೆ. ಈ ಭಾಷೆಯಲ್ಲಿನ ನನ್ನ ಇತರ ಭಾಷಣಗಳನ್ನು ಆಲಿಸಲು ಇದೇ ಹ್ಯಾಂಡಲ್ ಅನ್ನು ಅನುಸರಿಸಿ" ಎಂದು ತಿಳಿಸಲಾಗಿದೆ.
ಇನ್ಮುಂದೆ ಪ್ರಧಾನಿಗಳ ಭಾಷಣಗಳನ್ನು ನಮ್ಮ ಕನ್ನಡ ಭಾಷೆಯಲ್ಲೇ ಕೇಳಬಹುದು. ಇದಕ್ಕಾಗಿ ನರೇಂದ್ರ ಮೋದಿ ಕನ್ನಡ ಎಂಬ ಎಕ್ಸ್ ಖಾತೆಯನ್ನು ಫಾಲೋ ಮಾಡಬೇಕಿದೆ.