ಪಾಕಿಸ್ತಾನ ಈ ಹೆಸರು ಕೇಳಿದ್ರೆ, ನಿದ್ದೆಯಿಂದಲೂ ಎಚ್ಚರವಾಗಬೇಕು..!| Narendra Modi

MODI IN UP
Published on

Narendra Modi: ಭವಿಷ್ಯದಲ್ಲಿ ಯಾವುದೇ ಭಯೋತ್ಪಾದಕ ಕೃತ್ಯ ನಡೆದರೆ, ಭಾರತ ತನ್ನ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಪ್ರತಿಕಾರ ತಿರಿಸಿಕೊಳ್ಳುತ್ತದೆ ಎಂದು ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ(ಆಗಸ್ಟ್​ 2) ಎಚ್ಚರಿಕೆ ನೀಡಿದ್ದಾರೆ.

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮಾತನಾಡಿದ ಮೋದಿ, ಬ್ರಹ್ಮೋಸ್ ಕ್ಷಿಪಣಿಗಳನ್ನು ಈಗ ಲಕ್ನೋದಲ್ಲಿ ತಯಾರಿಸಲಾಗುವುದು ಮತ್ತು ಪಾಕಿಸ್ತಾನ ಮತ್ತೆ ಯಾವುದೇ ಪಾಪ ಕೃತ್ಯ ಎಸಗಿದರೆ, ಯುಪಿಯಲ್ಲಿ ತಯಾರಿಸಿದ ಕ್ಷಿಪಣಿಗಳ ಸಹಾಯದಿಂದ ಭಯೋತ್ಪಾದಕರನ್ನು ನಾಶಪಡಿಸುತ್ತೇವೆ ಎಂದು ಘೋಷಿಸಿದರು.

ಆಪರೇಷನ್ ಸಿಂಧೂರದ ಸಮಯದಲ್ಲಿ, ಜಗತ್ತು ನಮ್ಮ ಸ್ಥಳೀಯ ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಕಂಡಿದೆ. ನಮ್ಮ ವಾಯು ರಕ್ಷಣಾ ವ್ಯವಸ್ಥೆಗಳು, ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಆತ್ಮನಿರ್ಭರ ಭಾರತದ ಶಕ್ತಿಯನ್ನು ತೋರಿಸಿದೆ. ವಿಶೇಷವಾಗಿ ಬ್ರಹ್ಮೋಸ್ ಕ್ಷಿಪಣಿಗಳು ನಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಎಂದು ಪ್ರಧಾನಿ ಭಾರತದ ರಕ್ಷಣಾ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ಅಲ್ಲದೆ, ಪಾಕಿಸ್ತಾನ 'ಬ್ರಹ್ಮೋಸ್' ಹೆಸರು ಕೇಳಿದರೆ ಸಾಕು ರಾತ್ರಿಯಲ್ಲಿಯೂ ಸಹ ಎಚ್ಚರವಾಗಿರಬೇಕು ಎಂದು ಮೋದಿ ಎಚ್ಚರಿಕೆ ನೀಡಿದ್ದಾರೆ.

ಅನೇಕ ರಕ್ಷಣಾ ಸಂಸ್ಥೆಗಳು ಯುಪಿಯ ರಕ್ಷಣಾ ಕಾರಿಡಾರ್‌ನಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿವೆ. ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳು ಶೀಘ್ರದಲ್ಲೇ ನಮ್ಮ ರಕ್ಷಣಾ ಪಡೆಗಳನ್ನು ಬಲಗೊಳಿಸುತ್ತವೆ ಎಂದು ಮೋದಿ ತಿಳಿಸಿದರು.

ರಾಷ್ಟ್ರೀಯ ಏಕತೆ ಮತ್ತು ಆರ್ಥಿಕ ಸ್ವಾವಲಂಬನೆಯ ಅಗತ್ಯವನ್ನು ಒತ್ತಿ ಹೇಳಿದ ಮೋದಿ. ಜಗತ್ತಿನಲ್ಲಿ ಅಸ್ಥಿರತೆಯ ವಾತಾವರಣವಿದೆ. ಎಲ್ಲಾ ದೇಶಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಳ ಮೇಲೆ ಕೇಂದ್ರೀಕರಿಸುತ್ತಿವೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು ಅದಕ್ಕಾಗಿಯೇ ಭಾರತವು ತನ್ನ ಆರ್ಥಿಕ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ಜಾಗರೂಕವಾಗಿರುತ್ತದೆ" ಎಂದು ಈ ಸಂದರ್ಭದಲ್ಲಿ ಮೋದಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net